ADVERTISEMENT

ಕೆ.ಆರ್. ಪುರ: ವಿಶ್ವ ಕಿಡ್ನಿ ದಿನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:06 IST
Last Updated 14 ಮಾರ್ಚ್ 2019, 20:06 IST
ಕಾರ್ಯಕ್ರಮದಲ್ಲಿ ಜುಂಬಾ ಡ್ಯಾನ್ಸ್ ಪ್ರದರ್ಶನ ನಡೆಯಿತು
ಕಾರ್ಯಕ್ರಮದಲ್ಲಿ ಜುಂಬಾ ಡ್ಯಾನ್ಸ್ ಪ್ರದರ್ಶನ ನಡೆಯಿತು   

ಕೆ.ಆರ್.ಪುರ: ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಕೆ.ಆರ್.ಪುರದ ಶ್ರೀಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕೇರಳ ಸಮಾಜಂ ಟ್ರಸ್ಟ್ ವತಿಯಿಂದ ಕಿಡ್ನಿ ಸ್ವಾಸ್ಥ್ಯ ಜಾಗೃತಿಗಾಗಿ ಮ್ಯಾರಾಥಾನ್ ಓಟ ನಡೆಯಿತು.

‘ಎಲ್ಲರಿಗೂ, ಎಲ್ಲೆಡೆಯೂ ಕಿಡ್ನಿಯ ಸ್ವಾಸ್ಥ್ಯ ಎಂಬ ಸಂದೇಶದೊಂದಿಗೆ ಮಾಜಿ ಶಾಸಕ ಐವಾನ್ ನಿಗ್ಲಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಿಡ್ನಿ ಸ್ವಾಸ್ಥ್ಯ ಕಾಪಾಡಲು ಇಂತಹ ಕಾರ್ಯಕ್ರಮದ ಅವಶ್ಯವಿದೆ. ಆರೋಗ್ಯವಂತವಾಗಿರಲು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಉದ್ದೇಶ’ ಎಂದರು.

ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಸಾಂಬಶಿವ, ‘ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳಿಗೆ ಕೇರಳ ಸಮಾಜಂ ಮತ್ತು ತನ್ನಲ್ ಗ್ರೂಪ್ ಹಾಗೂ ಶ್ರೀಲಕ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ 50 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತದೆ’ ಎಂದರು.

ADVERTISEMENT

ಆಸ್ಪತ್ರೆಯ ಆವರಣದಿಂದ ಹಳೆ ಮದ್ರಾಸ್ ರಸ್ತೆ, ಬಸವನಪುರ ಕೆ.ಆರ್.ಪುರ ತರಕಾರಿ ಮಾರುಕಟ್ಟೆ ರಸ್ತೆವರೆಗೆ ಓಟ ನಡೆಯಿತು. ಕರ್ನಾಟಕ ಆಡಳಿತ ಸೇವೆ ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.