ADVERTISEMENT

ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ಅತಿ ದೊಡ್ಡ ವಿಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 20:34 IST
Last Updated 16 ಆಗಸ್ಟ್ 2022, 20:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನಎ– 380 ಶೀಘ್ರದಲ್ಲೇ ಬೆಂಗಳೂರಿಗೆ ಬರಲಿದೆ. ಅಕ್ಟೋಬರ್ 30ರಿಂದ ಎಮಿರೆಟ್ಸ್‌ ಜಂಬೊ ಜೆಟ್‌(79.8 ಮೀಟರ್‌ ಉದ್ದ) ವಿಮಾನ ದುಬೈ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡ್‌ ‘ಎಫ್‌’ಗೆ ಅನುಗುಣವಾಗಿ ಈ ವಿಮಾನ ಇಳಿಸುವ ರನ್‌ವೇ ಅಣಿಗೊಳಿಸಲಾಗುತ್ತಿದೆ. ದುಬೈನಿಂದ ಅಕ್ಟೋಬರ್ 30ರ ರಾತ್ರಿ 9.25 ಹೊರಟು ಬೆಂಗಳೂರಿಗೆ ಬೆಳಗಿನ ಜಾವ 2.30ರ ಸುಮಾರಿಗೆ ಬರಲಿದೆ.

ಬೋಯಿಂಗ್ ಪ್ರಯಾಣಿಕರ ವಿಮಾನ ಮಾತ್ರ ‘ಎಫ್’ ಕೋಡ್ ಹೊಂದಿದ್ದ ಪ್ರಯಾಣಿಕ ವಿಮಾನವಾಗಿತ್ತು. ಎ 380 ಡಬಲ್ ಡೆಕರ್ ವಿಮಾನವಾಗಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಜನ ಪ್ರಯಾಣಿಸಬಹುದು. ಮುಂಬೈ ಮತ್ತು ದೆಹಲಿ ಬಿಟ್ಟರೆ ಜಂಬೊ ಜೆಟ್ ವಿಮಾನ ಸಂಚಾರಕ್ಕೆ ಸಾಕ್ಷಿಯಾಗಲಿರುವ ದೇಶದ ಮೂರನೇ ನಗರ ಬೆಂಗಳೂರು ಎನಿಸಿಕೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.