ADVERTISEMENT

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ‘ಪ್ರಕೃತಿ ವಂದನಾ‘ ಪೂಜೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 6:23 IST
Last Updated 30 ಆಗಸ್ಟ್ 2020, 6:23 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಲ್ವ ಸಸಿ ನೆಟ್ಟು ಪೂಜೆ ಸಲ್ಲಿಸಿದರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಲ್ವ ಸಸಿ ನೆಟ್ಟು ಪೂಜೆ ಸಲ್ಲಿಸಿದರು   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸ ಕಾವೇರಿಯಲ್ಲಿ ಭಾನುವಾರ ಬೆಳಿಗ್ಗೆ ಪ್ರಕೃತಿ ವಂದನಾ ಕಾರ್ಯಕ್ರಮ ನಡೆಯಿತು. ಯಡಿಯೂರಪ್ಪ ಅವರು ಬಿಲ್ವ ಸಸಿ ನೆಟ್ಟು ಪೂಜೆ ಸಲ್ಲಿಸಿದರು. ಬಳಿಕ ವೃಕ್ಷಕ್ಕೆ ರಾಖಿ ಕಟ್ಟಿದರು.

ಪ್ರಕೃತಿಯನ್ನು ಪೂಜಿಸುವ ಅಭಿಯಾನಕ್ಕೆ ಶುಭ ಹಾರೈಸಿ ಮಾತನಾಡಿದ ಯಡಿಯೂರಪ್ಪ, ‘ಮನೆ ಮನೆಗಳಲ್ಲಿನ ಹಿತ್ತಿಲಲ್ಲಿ ಸಸಿ ನೆಟ್ಟು ರಕ್ಷಣೆ ಮಾಡಬೇಕು’ ಎಂದು ನಾಡಿನ ಜನರಿಗೆ ಮನವಿ ಮಾಡಿದರು.

ಈ ವೇಳೆ ಉಪಸ್ಥಿತರಿದ್ದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತುಳಸಿ ಗಿಡ ನೆಟ್ಟು ಪೂಜೆ ಸಲ್ಲಿಸಿದರು.

ADVERTISEMENT

ಆಗಸ್ಟ್ 30ರಂದು ಮನೆ ಮನೆಗಳಲ್ಲಿ ಪ್ರಕೃತಿ ಪೂಜೆ ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರು ಕರೆ ನೀಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.