ADVERTISEMENT

ವಾಟ್ಸ್‌ಆ್ಯಪ್‌ ಆಟದಿಂದ ಸಂತ್ರಸ್ತರಿಗೆ ನೆರವು

ಸಾಮಾಜಿಕ ಜವಾಬ್ದಾರಿ ಮೆರೆದ ಪ್ರೌಢಶಾಲಾ ವಿದ್ಯಾರ್ಥಿ

ಗುರು ಪಿ.ಎಸ್‌
Published 14 ಆಗಸ್ಟ್ 2020, 19:45 IST
Last Updated 14 ಆಗಸ್ಟ್ 2020, 19:45 IST
‘ವಿಶ್ವದ ಅತಿ ಬುದ್ಧಿವಂತ/ಕ್ರಿಯಾಶೀಲ ಬಾಲಕ’ ಪುರಸ್ಕಾರದೊಂದಿಗೆ ಯಥಾರ್ಥ್‌ ಮೂರ್ತಿ 
‘ವಿಶ್ವದ ಅತಿ ಬುದ್ಧಿವಂತ/ಕ್ರಿಯಾಶೀಲ ಬಾಲಕ’ ಪುರಸ್ಕಾರದೊಂದಿಗೆ ಯಥಾರ್ಥ್‌ ಮೂರ್ತಿ    

ಬೆಂಗಳೂರು: ‘ವಾಟ್ಸ್‌ಆ್ಯಪ್‌ ಹೌಸಿ’ ಆಟದ ಮೂಲಕ ಸಂಗ್ರಹವಾದ ಹಣವನ್ನು ಕೋವಿಡ್‌ ಸಂತ್ರಸ್ತರಿಗೆ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾನೆ ನಗರದ ವಿದ್ಯಾಶಿಲ್ಪ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಯಥಾರ್ಥ್ ಮೂರ್ತಿ.

‘ಲಾಕ್‌ಡೌನ್‌ ಸಮಯವನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಕಳೆಯಬೇಕು ಎಂಬ ಉದ್ದೇಶವಿತ್ತು. ವಾಟ್ಸ್‌ಆ್ಯಪ್‌ನಲ್ಲಿ ‘ವಾಟ್ಸ್‌ಆ್ಯಪ್‌ ಹೌಸಿ’ ಅಥವಾ ತಂಬೋಲಾ ಆಟ ಆಡಲು ನಿರ್ಧರಿಸಿದೆ. ಇದರಿಂದ ಸಂಗ್ರಹವಾದ ಹಣವನ್ನು ಕೊರೊನಾ ಸಂತ್ರಸ್ತರಿಗೆ ವಿತರಿಸಿದೆ’ ಎಂದು ಯಥಾರ್ಥ್‌ ಹೇಳುತ್ತಾನೆ.

‘ವಾಟ್ಸ್‌ಆ್ಯಪ್‌ನಲ್ಲಿ ಹೌಸಿ ಆಡುವವರಿಗೆ ₹100 ಟಿಕೆಟ್‌ನಂತೆ ನೀಡಲಾಗುತ್ತದೆ. ಗೆದ್ದವರಿಗೆ ಇಂತಿಷ್ಟು ಹಣ ನೀಡಬೇಕು. ಗೂಗಲ್‌ ಪೇ ಮೂಲಕ ಆಟಗಾರರು ಹಣ ಪಾವತಿಸುತ್ತಿದ್ದರು. ಗೆದ್ದವರಿಗೆ ನಾವು ದುಡ್ಡು ಕೊಡಬೇಕು. ಸಾಮಾಜಿಕ ಕಾರ್ಯಕ್ಕೆ ಈ ಹಣ ನೀಡಲು ಮಗ ನಿರ್ಧರಿಸಿದ ವಿಷಯ ತಿಳಿದ ಅನೇಕರು, ಗೆದ್ದ ಹಣವನ್ನೂ ತೆಗೆದುಕೊಳ್ಳಲಿಲ್ಲ. ₹5 ಸಾವಿರ ಸಂಗ್ರಹವಾಗಿತ್ತು. ಅದರಲ್ಲಿ, ₹4000 ಮೊತ್ತವನ್ನು ಬಿಸ್ಕತ್ತು ಮತ್ತು ಜ್ಯೂಸ್‌ ಖರೀದಿಸಿ, ಕೊರೊನಾ ಸೇನಾನಿಗಳಿಗೆ, ಸಂತ್ರಸ್ತರಿಗೆ ವಿತರಿಸಿದ್ದೆವು. ಉಳಿದ ₹1,000 ಹಣವನ್ನು ಕೀನ್ಯಾದಲ್ಲಿರುವ ಸಂತ್ರಸ್ತರಿಗೆ ಪಾವತಿ ಮಾಡಿದೆವು’ ಎಂದು ಅವರ ತಾಯಿ ಶಿಲ್ಪಾ ಸ್ಫೂರ್ತಿ.

ADVERTISEMENT

‘ನಾನು ಕೀನ್ಯಾದ ಸಾಮಾಜಿಕ ಸಂಸ್ಥೆಯೊಂದರ ಸದಸ್ಯೆಯಾಗಿದ್ದೇನೆ. ಅಲ್ಲಿನ ಮಕ್ಕಳ ನೆರವಿಗೆ ಸ್ವಲ್ಪ ಹಣ ಸಂದಾಯ ಮಾಡಿದೆವು. ಅನಾಥ ಮಕ್ಕಳಿಗೆ ದಿನಸಿ ಕೊಳ್ಳಲು ಅದನ್ನು ಬಳಸಲಾಯಿತು. ಈ ಹಣದ ಮೊತ್ತ ಕಡಿಮೆಯಿರಬಹುದು. ಆದರೆ, 14 ವರ್ಷದ ಬಾಲಕನೊಬ್ಬ ಈ ರೀತಿ ಸಹಾಯ ಮಾಡುತ್ತಿದ್ದಾನೆ. ನಾವೇಕೆ ಮಾಡಬಾರದು ಎಂದು ಹಲವರು ಧನಸಹಾಯ ಮಾಡಿದರು’ ಎಂದು ಅವರು ತಿಳಿಸಿದರು.

ಕೀನ್ಯಾದ ಸ್ವಹಿಲಿ ಭಾಷೆಯಲ್ಲಿ ಈ ಬಾಲಕ ಹಾಡಿದ ‘ಐ ಆ್ಯಮ್‌ ಚೈಲ್ಡ್‌ ಆಫ್‌ ಗಾಡ್‌’ ಅಲ್ಲಿನ ಅನೇಕರ ಗಮನ ಸೆಳೆದಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.