ADVERTISEMENT

ಬೇಗ ಭಾಷಣ ತಯಾರಿಸುತ್ತಿದ್ದ ಸ್ನೇಹಿತನಿಲ್ಲ: ಅನಂತಕುಮಾರ್‌ರನ್ನು ನೆನೆದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:03 IST
Last Updated 22 ಸೆಪ್ಟೆಂಬರ್ 2019, 19:03 IST
ಜೆ.ಪಿ. ನಡ್ಡಾ ಅವರು ಅನಂತಕುಮಾರ್‌ ಕುರಿತಾದ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಡಿ.ವಿ. ಸದಾನಂದ ಗೌಡ, ಬಿ.ಎಸ್‌. ಯಡಿಯೂರಪ್ಪ, ತೇಜಸ್ವಿನಿ ಅನಂತಕುಮಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಜೆ.ಪಿ. ನಡ್ಡಾ ಅವರು ಅನಂತಕುಮಾರ್‌ ಕುರಿತಾದ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಡಿ.ವಿ. ಸದಾನಂದ ಗೌಡ, ಬಿ.ಎಸ್‌. ಯಡಿಯೂರಪ್ಪ, ತೇಜಸ್ವಿನಿ ಅನಂತಕುಮಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅನಂತಕುಮಾರ್ ಅವರ ಹಿಂದಿ ಜ್ಞಾನ ಅದ್ಭುತವಾಗಿತ್ತು. 5 ನಿಮಿಷಗಳಲ್ಲೇ ಅದ್ಭುತವಾಗಿ ಭಾಷಣ ತಯಾರಿಸಿಕೊಡುತ್ತಿದ್ದರು.ನಾನು ಈ ಸ್ಥಾನಕ್ಕೇರಲು ಅವರು ಕೂಡಾ ಮೂಲ ಕಾರಣ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಅನಂತಕುಮಾರ್ ಅವರ 60ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ‘ಅನಂತಕುಮಾರ್ ಪ್ರತಿಷ್ಠಾನ’ಕ್ಕೆ ಚಾಲನೆ ನೀಡಲಾಯಿತು.

‘ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಅನಂತಕುಮಾರ್ ಪಾತ್ರ ದೊಡ್ಡದು.ಅವರಿಗೆ ದೇಶಸೇವೆ ಸಲ್ಲಿಸಲು ಇನ್ನೂ ಅವಕಾಶಇತ್ತು.ಆದರೆ, ನಾವು ಅವರನ್ನುಕಳೆದುಕೊಂಡಿದ್ದೇವೆ. ಅವರಅನುಪಸ್ಥಿತಿರಾಜ್ಯದಲ್ಲಿಎದ್ದು ಕಾಣುತ್ತಿದೆ’ ಎಂದು ಯಡಿಯೂರಪ್ಪ ಗದ್ಗದಿತರಾದರು.

ADVERTISEMENT

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ರಾಜ್ಯದಲ್ಲಿ ನಾನು ಅಚಾನಕ್ಕಾಗಿ‌ ಮುಖ್ಯಮಂತ್ರಿ ಆದಾಗ‌ ಅನಂತಕುಮಾರ್‌ ಅವರು ನನಗೆ ಸ್ಥಿತಃಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ನಗರದಲ್ಲಿ ಪ್ರಾರಂಭವಾಗಿರುವ ಸೆಂಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಗೆ (ಸಿಪೆಟ್‌)ಅನಂತಕುಮಾರ್ ಹೆಸರನ್ನು ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ‘ಅನಂತಕುಮಾರ್ಪಕ್ಷ ಸಂಘಟನೆ, ಸಮಾಜ‌ ಪರಿವರ್ತನೆ ವಿಚಾರದಲ್ಲಿ ಎಲ್ಲರಿಗೂ ಪ್ರೇರಣೆಯಾಗಿದ್ದರು. ಅಂತಹ ನಾಯಕನ ಜತೆಗೆ ಕೆಲಸ ಮಾಡುವ ಸೌಭಾಗ್ಯ‌ ನಮಗೆ ಸಿಕ್ಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.