ಬೆಂಗಳೂರು: ಯಲಚೇನಹಳ್ಳಿ ವಿಸ್ತರಿತ ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಜ.14ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಅವರು, '6 ಕಿ.ಮೀ ಉದ್ದದ ಯಲಚೇನಹಳ್ಳಿ ವಿಸ್ತರಿತ ಹಸಿರು ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಜ.14ರಂದು ಚಾಲನೆ ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ.
ಕನಕಪುರ ರಸ್ತೆಯಲ್ಲಿನ 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರಲಿವೆ. ಎಲ್ಲ ನಿಲ್ದಾಣಗಳಲ್ಲಿ ಅಂತಿಮ ಸಿದ್ಧತೆ ಭರದಿಂದ ಸಾಗಿದೆ. ಈ ಮಾರ್ಗದಲ್ಲಿನ ಪಿಲ್ಲರ್ಗಳ ನಡುವಣ ಜಾಗವನ್ನು ಸ್ವಚ್ಛಗೊಳಿಸುವುದು, ಆಲಂಕಾರಿಕ ಸಸಿಗಳನ್ನು ನೆಡುವುದು, ಗೇಟ್ಗಳಿಗೆ ಬಣ್ಣ ಬಳಿಯುವ ಪ್ರಕ್ರಿಯೆಯೂ ಜೋರಾಗಿ ನಡೆದಿದ್ದರೆ, ಮೆಟ್ರೊ ಸಂಚಾರದಿಂದ ಆಗುವ ಅನುಕೂಲಗಳನ್ನು ಸ್ಥಳೀಯರು ನೆನೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.