ADVERTISEMENT

ನಾಳೆ ಯಲಹಂಕ ಕರಗ

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:15 IST
Last Updated 20 ಮೇ 2019, 19:15 IST
ಯಲಹಂಕ ಕೆರೆ ಅಂಗಳದಲ್ಲಿರುವ ಕರಗ ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಯಲಹಂಕ ಕೆರೆ ಅಂಗಳದಲ್ಲಿರುವ ಕರಗ ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.   

ಯಲಹಂಕ: ಹಳೇನಗರದಲ್ಲಿ ಮಹೇಶ್ವರಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಬುಧವಾರ(ಮೇ 22) ನಡೆಯಲಿದೆ.

ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮ ದೇವಿಯ ಗುಡಿಯಿಂದ ಬುಧವಾರ ಮಧ್ಯರಾತ್ರಿ ಹೊರಡುವ ಹೂವಿನ ಕರಗ, ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಸಂಚರಿಸಿ, ಗುರುವಾರ ಬೆಳಗಿನ ಜಾವ ಮರಳಿ ದೇವಾಲಯಕ್ಕೆ ಹಿಂತಿರುಗಲಿದೆ.

ಕರಗ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲ ಗ್ರಾಮಗಳ 23 ದೇವರುಗಳ ಹೂವಿನ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ವಹ್ನಿಕುಲ ಕ್ಷತ್ರಿಯ ಮಂಡಳಿಯ ಸಂಚಾಲಕ ಮು.ಕೃಷ್ಣಮೂರ್ತಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.