ADVERTISEMENT

‘ಬಡವರಿಗಾಗಿ ವರ್ಷದೊಳಗೆ 10 ಸಾವಿರ ಮನೆ’

ಯಲಹಂಕ: ಕಾಯಂ ಹಕ್ಕುಪತ್ರ, ಪಿಂಚಣಿ ಆದೇಶ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:18 IST
Last Updated 28 ನವೆಂಬರ್ 2020, 20:18 IST
ಫಲಾನುಭವಿಗಳಿಗೆ ಶಾಸಕ ಎಸ್‌.ಆರ್‌.ವಿಶ್ವನಾಥ್ ಅವರು ಹಕ್ಕುಪತ್ರ ವಿತರಿಸಿದರು. ಜಿಲ್ಲಾಪಂಚಾಯ್ತಿ ಸದಸ್ಯ ಸಿ.ವೆಂಕಟೇಶ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಉಪತಹಶೀಲ್ದಾರ್ ವಿಜಯಕುಮಾರ್, ಶಿರಸ್ತೇದಾರ್ ರಜನೀಕಾಂತ್ ರೆಡ್ಡಿ ಇದ್ದಾರೆ
ಫಲಾನುಭವಿಗಳಿಗೆ ಶಾಸಕ ಎಸ್‌.ಆರ್‌.ವಿಶ್ವನಾಥ್ ಅವರು ಹಕ್ಕುಪತ್ರ ವಿತರಿಸಿದರು. ಜಿಲ್ಲಾಪಂಚಾಯ್ತಿ ಸದಸ್ಯ ಸಿ.ವೆಂಕಟೇಶ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಉಪತಹಶೀಲ್ದಾರ್ ವಿಜಯಕುಮಾರ್, ಶಿರಸ್ತೇದಾರ್ ರಜನೀಕಾಂತ್ ರೆಡ್ಡಿ ಇದ್ದಾರೆ   

ಯಲಹಂಕ: ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗಾಗಿ ವರ್ಷದೊಳಗೆ 10 ಸಾವಿರ ಮನೆಗಳನ್ನು ವಿತರಿಸುವ ಗುರಿ ಇದ್ದು, ಈಗಾಗಲೆ 4 ಕಡೆ ಭೂಮಿಪೂಜೆ ನೆರವೇರಿಸಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 94ಸಿಸಿ ಅಡಿಯಲ್ಲಿ ಕಾಯಂ ಹಕ್ಕುಪತ್ರ ಹಾಗೂ ವಿವಿಧ ವರ್ಗಗಳ ಜನರಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಯಲಹಂಕ ಮತ್ತು ಹೆಸರಘಟ್ಟ ವ್ಯಾಪ್ತಿಯಲ್ಲಿ ಈ ಹಿಂದೆಯೇ 94ಸಿಸಿ ಅಡಿಯಲ್ಲಿ 2 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಈಗ ಇನ್ನಷ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದರಿಂದ, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಯಾವುದೇ ದಾಖಲೆಗಳಿಲ್ಲದೆ ಜೀವನ ನಡೆಸುತ್ತಿದ್ದ ಬಡಕುಟುಂಬಗಳ ಆತಂಕ ದೂರವಾಗಿದೆ. ಈ ಜಾಗದ ಮಾಲೀಕರಿಗೆ ಶೀಘ್ರವೇ ಪಂಚಾಯ್ತಿಗಳಲ್ಲಿ ಖಾತಾ ಮಾಡಿಕೊಡಲಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.