
ಪ್ರಜಾವಾಣಿ ವಾರ್ತೆ
ಯಲಹಂಕ: ತರಹುಣಿಸೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮುನಿಲಕ್ಷ್ಮಮ್ಮ ಮುನೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಿ.ಪಿ.ಚಿಕ್ಕೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಒಟ್ಟು 12 ನಿರ್ದೇಶಕರ ಬಲ ಹೊಂದಿರುವ ಸಂಘದಲ್ಲಿ ಮುನಿಲಕ್ಷ್ಮಮ್ಮ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಬಮೂಲ್‌ನ ಮಾಜಿ ನಿರ್ದೇಶಕ ಟಿ.ಎಂ.ಶ್ರೀರಾಮ್, ಗ್ರಾಮದ ಮುಖಂಡರಾದ ಟಿ.ಪಿ.ಮುನೇಗೌಡ, ಟಿ.ಪಿ.ಪ್ರಕಾಶ್, ಟಿ.ವಿ.ಮಾರುತಿ, ಟಿ.ಪಿ.ಆಂಜಿನಪ್ಪ, ಸುರೇಂದ್ರಚಾರ್, ಶಿವಕುಮಾರ್.ಟಿ.ಪಿ, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್‌ಕುಮಾರ್.ಟಿ.ಎಸ್, ಅಮರನಾಥ.ಟಿ.ಬಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.