ADVERTISEMENT

‘ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಲಿ’

ಯುವಜನರ ಹಕ್ಕುಗಳು ಸಂವಾದದಲ್ಲಿ ವಿದ್ಯಾರ್ಥಿ ಮುಖಂಡರ ಮಾತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:04 IST
Last Updated 16 ಫೆಬ್ರುವರಿ 2019, 20:04 IST
ಸಂವಾದದಲ್ಲಿ ಸುರಭಿ ದ್ವಿವೇದಿ, ಅಖಿಲ ಭಾರತ ದಲಿತ ಮಹಿಳಾ ಅಧಿಕಾರ್‌ ಮಂಚ್‌ನ ಪ್ರಧಾನ ಕಾರ್ಯದರ್ಶಿ ಆಶಾ ಕೌತಾಲ್, ಆಶಿಶ್‌ ಚವ್ಹಾಣ್‌ ಹಾಗೂ ಗುರುರಾಜ ದೇಸಾಯಿ ಚರ್ಚಿಸಿದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಸುರಭಿ ದ್ವಿವೇದಿ, ಅಖಿಲ ಭಾರತ ದಲಿತ ಮಹಿಳಾ ಅಧಿಕಾರ್‌ ಮಂಚ್‌ನ ಪ್ರಧಾನ ಕಾರ್ಯದರ್ಶಿ ಆಶಾ ಕೌತಾಲ್, ಆಶಿಶ್‌ ಚವ್ಹಾಣ್‌ ಹಾಗೂ ಗುರುರಾಜ ದೇಸಾಯಿ ಚರ್ಚಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು, ನಿರುದ್ಯೋಗದ ಪ್ರಮಾಣ ಕಡಿಮೆಗೊಳಿಸಬೇಕು’ ಎಂಬ ಬಹುಮತದ ಕೂಗು ಗಾಂಧಿಭವನದಲ್ಲಿ ಶನಿವಾರ ಮೊಳಗಿತು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಸಂವಾದ ಸಂಸ್ಥೆಯು ಆಯೋಜಿಸಿದ್ದ ‘ಭಾರತದಲ್ಲಿ ಯುವಜನರ ಹಕ್ಕುಗಳು’ ಕುರಿತ ಸಂವಾದದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರಿಂದ ಈ ಮಾತು ಕೇಳಿಬಂತು.

‘ಕೇಂದ್ರ ಸರ್ಕಾರ ಸ್ಟ್ಯಾಂಡ್‌ ಅಪ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಎಂಬ ಆಕರ್ಷಕ ಹೆಸರಿನ ಯೋಜನೆಗಳನ್ನು ತಂದಿದೆ. ಇವು
ಗಳಿಂದ ತಳಸಮುದಾಯದ ಯುವಜನರಿಗೆ ಅನುಕೂಲ ವಾಗಿಲ್ಲ. ಎನ್‌ಎಸ್‌ಎಸ್‌ಒ ಸಮೀಕ್ಷೆ ಪ್ರಕಾರ ಐದು ವರ್ಷಗಳಲ್ಲಿ
ಶೇ 6.1ರಷ್ಟು ನಿರುದ್ಯೋಗ ಪ್ರಮಾಣ ಹೆಚ್ಚಿದೆ’ ಎಂದು ನ್ಯಾಷನಲ್‌ ಸ್ಟೂಡೆಂಟ್‌ ಯೂನಿಯನ್‌ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸುರಭಿ ದ್ವಿವೇದಿ ಅಸಮಾಧಾನ ಹೊರಹಾಕಿದರು.

ADVERTISEMENT

‘ದೇಶದಲ್ಲಿ ಐದು ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಿದೆ. ವಿದ್ಯಾರ್ಥಿ ವೇತನಗಳ ಮೊತ್ತ ಹೆಚ್ಚಳವಾಗಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಿಶ್‌ ಚವ್ಹಾಣ್‌ ಹೇಳಿದರು.

ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಗುರುರಾಜ ದೇಸಾಯಿ, ‘ಗರೀಬಿ ಹಟಾವೋ ಎಂದವರು, ಅಚ್ಚೇ ದಿನ್‌ ತರುತ್ತೇವೆ ಎಂದವರೂ ಯುವಜನರ ಶ್ರಮವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೇಶದಲ್ಲಿ ಪ್ರತಿವರ್ಷ 1.5 ಕೋಟಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪೂರೈಸುತ್ತಾರೆ. ಅದರಲ್ಲಿ 5.5 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ’ ಎಂದು ಆಡಳಿತ ವರ್ಗದ ವಿರುದ್ಧ ಆಕ್ರೋಶ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.