ADVERTISEMENT

ಕೃಷಿ ವಿವಿಯಿಂದ ಯೂಟ್ಯೂಬ್ ಚಾನೆಲ್ ಆರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2020, 8:57 IST
Last Updated 22 ಮೇ 2020, 8:57 IST
   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸಹಾಯವಾಣಿಗೆ ಶುಕ್ರವಾರ ಚಾಲನೆ ನೀಡಿದೆ.

ಕೃಷಿ ವಿಶ್ವವಿದ್ಯಾಲಯದ ಇತಿಹಾಸ, ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ, ಕೃಷಿ ವಿಜ್ಞಾನ ಕೇಂದ್ರಗಳು, ರೈತರಿಗೆ ನೀಡುವ ಸೌಲಭ್ಯಗಳ ಬಗ್ಗೆ ಈ ಚಾನೆಲ್‌ ನಲ್ಲಿ ಮಾಹಿತಿ ಸಿಗಲಿದೆ.

ಚಾನೆಲ್ ವೀಕ್ಷಿಸಲು ಮತ್ತು ಚಂದಾದಾರರಾಗಲು https://www.youtube.com/channel/UCT3_lfb8uL8gXMJtckT3Bqgಲಿಂಕ್ ಸಂಪರ್ಕಿಸಬಹುದು.

ADVERTISEMENT

ಉಚಿತ ಸಹಾಯವಾಣಿ ಸಂಖ್ಯೆ 18004250571 ಗೆ ಚಾಲನೆ ನೀಡಲಾಗಿದ್ದು, ರೈತರು ಕರೆ ಮಾಡಿ ಕೃಷಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಬಹುದು.

ಬೆಳೆಗಳಿಗೆ ಯಾವುದೇ ಕೀಟಬಾಧೆ ಅಥವಾ ರೋಗ ತಗುಲಿದ್ದರೆ ಅದರ ಫೋಟೊ ತೆಗೆದು 9482477812 ಕಳುಹಿಸಿದರೆ, ತಜ್ಞರು ವಿವರಣೆ ನೀಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಂ. ಬೈರೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.