ADVERTISEMENT

ಕರಗಕ್ಕೆ ಭೌಗೋಳಿಕ ವೈಶಿಷ್ಟ್ಯದ ಸ್ಥಾನಕ್ಕಾಗಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 18:08 IST
Last Updated 28 ಅಕ್ಟೋಬರ್ 2020, 18:08 IST
ತಿಗಳ ಯುವ ಬ್ರಿಗೇಡ್‌ನ ಲಾಂಛನವನ್ನು ಆನಂದ ಗುರೂಜಿ ಬಿಡುಗಡೆ ಮಾಡಿದರು
ತಿಗಳ ಯುವ ಬ್ರಿಗೇಡ್‌ನ ಲಾಂಛನವನ್ನು ಆನಂದ ಗುರೂಜಿ ಬಿಡುಗಡೆ ಮಾಡಿದರು   

ಬೆಂಗಳೂರು: ಐತಿಹಾಸಿಕ ಮಹತ್ವ ಇರುವ ಬೆಂಗಳೂರು ಕರಗಕ್ಕೆ ಭೌಗೋಳಿಕ ವೈಶಿಷ್ಟ್ಯದ ಪಟ್ಟಿಯಲ್ಲಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ತಿಗಳ ಕ್ಷತ್ರೀಯ ಯುವ ಬ್ರಿಗೇಡ್‌ ವತಿಯಿಂದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ ಗುರೂಜಿ ಅಭಿಯಾನಕ್ಕೆ ಚಾಲನೆ ನೀಡಿ ಸಂಘಟನೆಯ ಲಾಂಛನ ಬಿಡುಗಡೆ ಮಾಡಿದರು.

ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಎಂ. ಲಕ್ಷ್ಮೀಶ ಮಾತನಾಡಿ, ‘ಕರಗದ ಸಂಪ್ರದಾಯವನ್ನು 1,200 ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಹಾಭಾರತದ ಹಿನ್ನೆಲೆ ಹೊಂದಿರುವ ತಿಗಳ ಕ್ಷತ್ರೀಯ ಸಮುದಾಯ ಈ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದೆ. ಮೈಸೂರಿನ ದಸರಾ ಉತ್ಸವಕ್ಕೆ ನೀಡಿರುವ ಭೌಗೋಳಿಕ ವೈಶಿಷ್ಟ್ಯದ ಸ್ಥಾನಮಾನ ಕರಗ ಉತ್ಸವಕ್ಕೂ ಸಿಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂಬ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಬೆಂಗಳೂರು ಕರಗ ಪ್ರೇಮಿಗಳು ಮತ್ತು ಸಮುದಾಯದವರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.