ADVERTISEMENT

ಜನವರಿ 3ರಿಂದ ಯುವರಂಗ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 13:44 IST
Last Updated 2 ಜನವರಿ 2021, 13:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಜ. 3ರಿಂದ 18ರ ತನಕ ಯುವರಂಗ ನಾಟಕೋತ್ಸವ ನಡೆಯಲಿದೆ.

15 ವಿವಿಧ ರಂಗತಂಡಗಳು ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳನ್ನು ಪ್ರದರ್ಶಿಸಲಿವೆ. ಜ. 3ರಂದು ದೃಶ್ಯಕಾವ್ಯ ರಂಗತಂಡವು ‘ಮಾಯಾಪೇಟೆ’ ನಾಟಕವನ್ನು ಪ್ರದರ್ಶಿಸಲಿದೆ. ಜ.11ರಂದು ಸಿಜಿಕೆ ನೆನಪಿನಲ್ಲಿ ಅಂಚೆ ಲಕೋಟೆ ಬಿಡುಗಡೆಯಾಗಲಿದೆ (ಸಂಘಟನೆ: ರಂಗನಿರಂತರ). 15 ದಿನಗಳ ಕಾಲ ನಡೆಯಲಿರುವ ಯುವರಂಗದಲ್ಲಿ ಸಂವಾದ, ರಂಗ ಗೀತೆಗಳ ಗಾಯನ ಕಾರ್ಯಕ್ರಮವೂ ನಡೆಯಲಿದೆ. ಜ. 18ರಂದು ಯುವರಂಗದ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಯುವ ರಂಗಕರ್ಮಿ ರಾಜಗುರು ಹೊಸಕೋಟೆ ಅವರಿಗೆ ಕಾಜಾಣ ಯುವ ರಂಗ ಪುರಸ್ಕಾರ 2021 ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ: 99641 40723, 99025 90303, 97422 42313ಗೆ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.