ಬೆಂಗಳೂರು: ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ಹಿರೇಹಳ್ಳಿಯ ಗಗನ್ ಗೌಡ ಎಂಬ ಬಾಲಕನಿಗೆ ಸಚಿವ ಜಮೀರ್ ಅಹಮದ್ ₹5 ಲಕ್ಷ ವೈದ್ಯಕೀಯ ನೆರವು ನೀಡಿದರು.
ಬಾಲಕನ ಚಿಕಿತ್ಸೆಗೆ ₹35 ಲಕ್ಷ ಅಗತ್ಯವಿದ್ದು, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮೂಲಕ ನೆರವಿಗಾಗಿ ಬೆಂಗಳೂರಿಗೆ ಬಂದಿದ್ದ ಬಾಲಕ ಗಗನ್ ಗೌಡ ಹಾಗೂ ಆತನ ತಂದೆ ಚೆಲುವಪ್ಪ ಅವರನ್ನು ವಿಕಾಸ ಸೌಧ ಕಚೇರಿಗೆ ಕರೆಸಿಕೊಂಡ ಸಚಿವರು ನೆರವು ಹಸ್ತಾಂತರಿಸಿದರು.
ಶಾಸಕರಾದ ಗಣೇಶ್, ಅಸೀಫ್ ಸೇಠ್, ಭರತ್ ರೆಡ್ಡಿ, ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.