ADVERTISEMENT

ಅಖಂಡ ಕರ್ನಾಟಕದ ನಿರ್ಮಾಣವಾಗಲಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:55 IST
Last Updated 20 ಅಕ್ಟೋಬರ್ 2012, 8:55 IST

ಭಾಲ್ಕಿ: ಅಭಿವೃದ್ಧಿ, ಆಸಕ್ತಿ ಮತ್ತು ಅಭಿಮಾನದಲ್ಲಿ ಅಖಂಡ ಕರ್ನಾಟಕದ ನಿರ್ಮಾಣವಾಗಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ಎಲ್ಲ ಜಾತಿ, ಜನಾಂಗ ಭಾಷೆಯವರೂ ಸಹ ಕನ್ನಡಿಗರೇ ಎಂಬ ಜ್ಞಾನ ಎಲ್ಲಡೆ ವಿಸ್ತಾರವಾಗಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಕ್ರಿಯಾಶೀಲವಾಗಿ ಶ್ರಮಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ ನುಡಿದರು.

ಪಟ್ಟಣದ ದೇವಿನಗರ ಭವಾನಿ ಮಂದಿರದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಗುರುವಾರ ಕಸಾಪ ದಿಂದ ಆಯೋಜಿಸಿದ್ದ ಸಾಹಿತ್ಯ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಸಾಪ ಅಧ್ಯಕ್ಷ ಸುಭಾಷ ಹುಲಸೂರೆ ಮಾತನಾಡಿ, ಕನ್ನಡದ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು.
 
ಕನ್ನಡಮ್ಮನ ಸೇವೆಯಲ್ಲಿ ತೊಡಗಿದರೆ ಕಲ್ಪವೃಕ್ಷದಂಥ ಫಲಗಳು ಲಭಿಸುತ್ತವೆ ಎಂದರು. ಪತ್ರ ಕರ್ತ ಚಂದ್ರಕಾಂತ ಬಿರಾದಾರ, ಮಹಾ ದೇವ ಸಜ್ಜನ್ ವಿಶೇಷ ಉಪನ್ಯಾಸ ಮಂಡಿಸಿದರು. ನಗರ ಠಾಣೆಯ ಎಎಸ್‌ಐ ಹಣಮಂ ತಪ್ಪ ಚಿದ್ರೆಯವರ ಕೊಳಲು ವಾದನ ಗಮನ ಸೆಳೆಯಿತು.
 
ಸರ್ಕಾರಿ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ. ಸಂತೋಷ ಕಾಳೆ, ಭವಾನಿ ಮಂದಿರದ ಅಧ್ಯಕ್ಷ ಸುರೇಶ ಕಾಳೆ, ನಿರಂಕಾರ, ಶಿವರಾಜ ಎನ್. ಅಶೋಕ ರಾಜೋಳೆ, ಷಡಕ್ಷರಿ ಹಿರೇಮಠ, ಸಯಾಜಿರಾವ ಪಾಟೀಲ, ಶಿಕ್ಷಣ ಸಂಯೋಜಕ ಮಾರುತಿರಾವ ವಾಘೆ, ನಾಗಭೂಷಣ ಮಾಮಡಿ, ಶಂಭುಲಿಂಗ ಕಾಮಣ್ಣ, ಡಾ. ಸೋಮನಾಥ ನುಚ್ಚಾ, ಅಶೋಕ ಮೈನಳ್ಳೆ ಇದ್ದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.