ADVERTISEMENT

ಅನಾಥ ಮಕ್ಕಳಿಗೆ ಹಣ್ಣಹಂಪಲು ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 7:40 IST
Last Updated 16 ಏಪ್ರಿಲ್ 2012, 7:40 IST

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಎಸ್.ಆರ್.ವೈ. ಕ್ರಿಯೇಟಿವ್ ಇಂಡಿಯಾ ಟ್ರಸ್ಟ್ ವತಿಯಿಂದ ನಗರದ ಬಸವಮುಕ್ತಿ ಮಂದಿರದಲ್ಲಿ ಶನಿವಾರ ಅನಾಥ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಡಾ. ಅಂಬೇಡ್ಕರ್ ಅವರು ಸಾಕಷ್ಟು ಕಷ್ಟದ ನಡುವೆ ಶಿಕ್ಷಣ ಪೂರೈಸಿದ್ದರು. ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸಿದ್ದರು ಎಂದು ಉಪನ್ಯಾಸಕ ವಿಜಯಕುಮಾರ ಪಾಂಚಾಳ್ ತಿಳಿಸಿದರು.

ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅರಿತು ಮೈಗೊಡಿಸಿಕೊಳ್ಳಬೇಕು ಎಂದು ಎಸ್.ಆರ್.ವೈ. ಕ್ರಿಯೇಟಿವ್ ಇಂಡಿಯಾ ಟ್ರಸ್ಟ್ ಅಧ್ಯಕ್ಷ ಯೋಗೀಶ ಚ. ಮಠದ ಸಲಹೆ ನೀಡಿದರು.ಟ್ರಸ್ಟ್ ಉಪಾಧ್ಯಕ್ಷ ರಫೀಕ್ ಎ. ಸೌದಾಗರ್, ಕಾರ್ಯದರ್ಶಿ ಸುನೀಲಕುಮಾರ ಪಿ. ಸಂತಪುರೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.