ADVERTISEMENT

ಅಮರೇಶ್ವರ ಜಾತ್ರೆ: ಕಬಡ್ಡಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 9:00 IST
Last Updated 21 ಫೆಬ್ರುವರಿ 2012, 9:00 IST

ಔರಾದ್: ಅಮರೇಶ್ವರ ಜಾತ್ರೆ ನಿಮಿತ್ತ ಸೋಮವಾರ ಇಲ್ಲಿ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಶಾಸಕ ಪ್ರಭು ಚವ್ಹಾಣ್ ಜ್ಯೋತಿ ಬೆಳಗಿಸಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ದೇಶಿಯ ಕ್ರೀಡೆಗೆ ಮಹತ್ವ ನೀಡಿದರೆ ನಮ್ಮ ಪ್ರಾಚೀನ ಕಲೆ ಜೀವಂತಿಕೆಯಾಗಿರುತ್ತದೆ ಎಂದು ಹೇಳಿದರು. ಔರಾದ್‌ನಲ್ಲಿ ವ್ಯಾಯಾಮ ಶಾಲೆ ಮಂಜೂರಾಗಿದೆ. ಅದಕ್ಕಾಗಿ ಸ್ಥಳಾವಕಾಶ ಕಲ್ಪಿಸಿ ಆದಷ್ಟು ಬೇಗ ಇಲ್ಲಿಯ ಯುವಕರಿಗೆ ಅದರ ಉಪಯೋಗ ಕಲ್ಪಿಸಲಾಗುವುದು ಎಂದು ಹೇಳಿದರು. ನಮ್ಮ ಗ್ರಾಮೀಣ ಭಾಗದ ಕ್ರೀಡಾಪಟುಗಳು ಎತ್ತರಕ್ಕೆ ಬೆಳೆಯಬೇಕು. ಅಂಥ ಕಲಾವಿದರಿಗೆ ತಾವು ಎಲ್ಲ ರೀತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ್ ಶಿವಕುಮಾರ ಶೀಲವಂತ, ಸರ್ಕಲ್ ಇನ್ಸ್‌ಪೆಕ್ಟರ್ ವಿನೋದಕುಮಾರ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇವಕತೆ, ಸತೀಶ ನೌಬಾದೆ, ರಾಜಕುಮಾರ ಪೋಕಲವಾರ, ಅಮರ ಯಡವೆ, ಶರಣಪ್ಪ ಪಂಚಾಕ್ಷಿರೆ, ಸಚಿನ ರಾಠೋಡ, ಸಂಘಟಕರಾದ ಕಲ್ಲಪ್ಪ ಅಲ್ಮಾಜೆ, ಹಾವಗಿರಾವ ವಟಗೆ, ಅಶೋಕ ಅಲ್ಮಾಜೆ, ಶರಣಬಸಪ್ಪ ಸಾವಳೆ, ಸಂಗಮೇಶ ಶೆಟಕಾರ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆ ಒಂಬತ್ತು ತಂಡ ಟೂರ್ನಿಯಲ್ಲಿ  ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.