ADVERTISEMENT

ಇಷ್ಟಲಿಂಗ ಪೂಜೆಯೊಂದಿಗೆ ಶಿವರಾತ್ರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 9:55 IST
Last Updated 3 ಮಾರ್ಚ್ 2011, 9:55 IST

ಬೀದರ್: ನಗರದ ಬಸವಮಂಟದಲ್ಲಿ ಬುಧವಾರ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಮಹಾಶಿವರಾತ್ರಿ ಆಚರಿಸಲಾಯಿತು.ಮಾತೆ ನಿಶ್ಚಲಾಂಬ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸರ್ವ ಶರಣರ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿದ್ದರು. ವಚನ ಸುಧಾ, ಕನ್ನಡಾಂಬೆ ಮೂಲಗೆ, ಸುಲೋಚನಾ ಪಟ್ನೆ, ಮಹಾರುದ್ರ, ಬಸವಕುಮಾರ ಹಾಗೂ ಸುರೇಶ ಸ್ವಾಮಿ ಇಷ್ಟಲಿಂಗ ಪೂಜೆ ವಿಧಾನ ನಡೆಸಿಕೊಟ್ಟರು.

ವಿದ್ಯಾವತಿ ಕುಶಾಲರಾವ ಪಾಟೀಲ್ ದಂಪತಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉದ್ಯಮಿ ನಾಗಶೆಟ್ಟಿ ದಾಡಗಿ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಪ್ರಮುಖರಾದ ಮಾಣಿಕಪ್ಪ ನಿಂಬೂರೆ, ಶಿವರಾಜ ಪಾಟೀಲ್ ಅತಿವಾಳ, ಶಿವಶರಣಪ್ಪ ಪಾಟೀಲ್, ಸಂಜೀವಕುಮಾರ ಪಾಟೀಲ್, ರಾಜು ಕಮಠಾಣೆ, ಶಾಂತಾದೇವಿ ಬಿರಾದಾರ, ಶೀತಲ್ ಸೂರ್ಯವಂಶಿ, ಶೋಭಾ ನಿಂಬೂರೆ ಮತ್ತಿತರರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.