ADVERTISEMENT

ಉದ್ಘಾಟನೆಗೊಂಡರೂ ಆರಂಭವಾಗದ ಪೊಲೀಸ್ ಠಾಣೆ

ಶೀಘ್ರ ಆರಂಭಕ್ಕೆ ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2018, 6:30 IST
Last Updated 25 ಮೇ 2018, 6:30 IST
ಹುಮನಾಬಾದ್‌ ಬಸ್‌ ನಿಲ್ದಾಣ ಪ್ರವೇಶ ದ್ವಾರದ ಬಳಿ ನವೆಂಬರ್‌ 2017ಕ್ಕೆ ಐಜಿಪಿ ಆಲೋಕಕುಮಾರ ಅವರು ಉದ್ಘಾಟಿಸಿರುವ ಪೊಲೀಸ್‌ ಹೊರ ಠಾಣೆ ಬೀಗಜಡಿದುಕೊಂಡು ಬಿದ್ದಿರುವುದು
ಹುಮನಾಬಾದ್‌ ಬಸ್‌ ನಿಲ್ದಾಣ ಪ್ರವೇಶ ದ್ವಾರದ ಬಳಿ ನವೆಂಬರ್‌ 2017ಕ್ಕೆ ಐಜಿಪಿ ಆಲೋಕಕುಮಾರ ಅವರು ಉದ್ಘಾಟಿಸಿರುವ ಪೊಲೀಸ್‌ ಹೊರ ಠಾಣೆ ಬೀಗಜಡಿದುಕೊಂಡು ಬಿದ್ದಿರುವುದು   

ಹುಮನಾಬಾದ್: ಸುಗಮ ಸಂಚಾರ ಜತೆಯಲ್ಲಿ ಅಪರಾಧ ಚಟುವಟಿಕೆ ತಡೆಗಟ್ಟುವ ಉದ್ದೇಶದಿಂದ 2017ರ ನವೆಂಬರ್‌ ತಿಂಗಳಲ್ಲಿ ಆರಂಭಿಸಲಾದ ಹೊರ ಪೊಲೀಸ್ ಠಾಣೆ ಉದ್ಘಾಟನೆಗೊಂಡು 7ತಿಂಗಳು ಗತಿಸಿದರೂ ಸೇವೆ ಆರಂಭಿಸಿಲ್ಲ.

ಅಪಘಾತ ಮುಕ್ತ ವಾಹನ ಸಂಚಾರಕ್ಕಾಗಿ ಹೆಲ್ಮೆಟ್‌ ಕಡ್ಡಾಯ ಅಭಿಯಾನ ಸಂಪೂರ್ಣ ಸ್ಥಗಿತಗೊಂಡಿದ್ದು ಕೇಳುವವರಿಲ್ಲದ ಕಾರಣ ದ್ವಿಚಕ್ರವಾಹನ ಸವಾರರು  ಹೆಲ್ಮೆಟ್‌ ರಹಿತವಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ.

ಕಳೆದ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಹೆಲ್ಮೆಟ್ ಬಳಕೆಯಿಂದ ಆಗುವ ಲಾಭದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕೆಲಸ ಐಜಿಪಿ ಆಲೋಕಕುಮಾರ ಅವರ ನೇತೃತ್ವದಲ್ಲಿ ನಡೆದಿತ್ತು. ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡುವವರನ್ನು ಹಿಡಿದು ದಂಡ ವಿಧಿಸಿದ್ದರಿಂದ ಜನ ಸಹಜವಾಗಿಯೇ ಹೆಲ್ಮೆಟ್‌ ಧರಿಸುತ್ತಿದ್ದರು. ಆದರೆ, ಇಲಾಖೆ ಅಧಿಕಾರಿಗಳು ನಂತರ ಮೃದು ಧೋರಣೆ ತಾಳಿದ್ದರಿಂದಾಗಿ ಜನ ಹೆಲ್ಮೆಟ್‌ ಇಲ್ಲದೇ ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿದೆ.

ADVERTISEMENT

ಪ್ರಯಾಣಿಕ ಆಟೊ ಚಾಲಕರು ನಿಯಮ ಉಲ್ಲಂಘಿಸಿ, ಶಾಲಾ ಮಕ್ಕಳನ್ನು ತುಂಬಿಕೊಂಡು ಹೋಗುವುದು ನಿಂತಿಲ್ಲ. ವಿಶೇಷವಾಗಿ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಕಳ್ಳರ ಹಾವಳಿ ಹಿಂದೆಂದಿಗಿಂತ ಹೆಚ್ಚಾಗಿದ್ದು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರು ಒತ್ತಾಸೆ.

ಹೆಲ್ಮೆಟ್ ದಾರಣೆ ಕುರಿತು ನಡೆಸಲಾದ ಜಾಗೃತಿ ದಿನ ನನ್ನನ್ನು ಮಾದರಿ ಎಂದು ಆಯ್ಮೆ ಮಾಡಿ, ಸನ್ಮಾನಿಸಿದ್ದಕ್ಕೆ ನಿಜಕ್ಕೂ ತುಂಬಾನೆ ಖುಷಿ ಆಗಿತ್ತು. ಆದರೆ, ತದನಂತರದ ಬೆಳವಣಿಗೆಯಿಂದ ಕೊಂಚ ಬೇಸರ ಆಗಿದೆ.

ಅದನ್ನು ಹಿಂದಿನಂತೆ ಯಥಾವತ್ತ ಮುಂದುವರಿಸಿಕೊಂಡು ಹೋಗುವು ಮೂಲಕ ವಾಹನ ಚಾಲಕರ ಪ್ರಾಣ ರಕ್ಷಣೆಗೆ ಮುಂದಾಗುವುದರ ಜೊತೆಗೆ ಅಪರಾಧ ಪ್ರಕರಣ ನಿಯಂತ್ರಣಕ್ಕೂ ಮುಂದಾಗಬೇಕು ಎಂಬುದು ರೇಂದ್ರ ಹುಡಗೀಕರ್‌ ಅವರ ಮನವಿ.

**
ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್‌ ಹೊರ ಠಾಣೆ ಸೇವೆ ಚಾಲನೆಯಲ್ಲಿ ಇರಲಿಲ್ಲ. ವಾರದ ನಂತರ ಹೊರ ಪೊಲೀಸ್‌ ಠಾಣೆ ಸೇವೆ ಆರಂಭಿಸಲಾಗುವುದು
ಜೆ.ಎಸ್.ನ್ಯಾಮಗೌಡರ್‌, ಸಿಪಿಐ, ಹುಮನಾಬಾದ್
**

–ಶಶಿಕಾಂತ ಭಗೋಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.