ADVERTISEMENT

ಔರಾದ್: ಕೆಜೆಪಿ ಧರಣಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:20 IST
Last Updated 4 ಜುಲೈ 2013, 6:20 IST

ಔರಾದ್: ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಸೋಮವಾರದಿಂದ ಖೇರ್ಡಾ ಮತ್ತು ಹೊಕ್ರಾಣಾ ಗ್ರಾಮಸ್ಥರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಬುಧವಾರ ಕೆಜೆಪಿ ಮುಖಂಡರು ಧರಣಿ ನಡೆಸಿದರು.

ರಮೇಶ ದೇವಕತೆ, ಧೋಂಡಿಬಾ ನರೋಟೆ, ಸೂರ್ಯಕಾಂತ ಫುಲಾರಿ, ಶಿವಾಜಿ ಬೋಗಾರ, ಜಗನ್ನಾಥ ಮುದಾಳೆ, ಅಫಜಲ್ ಪಠಾಣ, ರಾಜಕುಮಾರ ಕನಸೆ, ಸಂಜು ವಡೆಯರ್ ನೇತೃತ್ವದಲ್ಲಿ ಧರಣಿ ನಡೆಯಿತು.

ಖೇರ್ಡಾ ಮತ್ತು ಹೊಕ್ರಾಣಾ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಯಾವೊಬ್ಬ ಅಧಿಕಾರಿ ಕೇಳಲು ಬಂದಿಲ್ಲ.
ರಸ್ತೆ ಕಾಮಗಾರಿ ಅಪೂರ್ಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೆನೆಗುದಿಗೆ ಬಿದ್ದ ಕಾಮಗಾರಿ ಆರಂಭಿಸದಿದ್ದಲ್ಲಿ ಔರಾದ್ ಬಂದ್‌ಗೆ ಕರೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.