ADVERTISEMENT

ಕಾಮಗಾರಿ ಅನ್ಯರ ಪಾಲಾಗಲು ಬಿಡೆವು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:50 IST
Last Updated 14 ಫೆಬ್ರುವರಿ 2011, 8:50 IST

ಹುಮನಾಬಾದ್: ಪರಿಶಿಷ್ಟ ಜಾತಿಗೆ ಮೀಸಲಾದ ಸರ್ಕಾರಿ ಕಾಮಗಾರಿಗಳನ್ನು ಅನ್ಯರ ಪಾಲುಗುವದಕ್ಕೆ ಬಿಡುವುದಿಲ್ಲ ಎಂದು ಪರಿಶಿಷ್ಟ ಜಾತಿ ಗುತ್ತಿಗೆದಾರ ಸಂಘದ ನೂತನ ಅಧ್ಯಕ್ಷ ಸಂಜೀವಕುಮಾರ ರೂಗನ್ ತಿಳಿಸಿದರು. ಭಾನುವಾರ ನಡೆದ ಸಭೆಯಲ್ಲಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅವರು ಮಾತನಾಡಿದರು.ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿಗಳು ದಕ್ಕದಂತೆ ನೋಡಲಾಗುತ್ತಿದೆ ಎಂದು ದೂರಿದ ಅವರು ಈ ನಿಟ್ಟಿನಲ್ಲಿಮುಂಬರುವ ದಿನಗಳಲ್ಲಿ ಸಂಘ ದಿಟ್ಟ ಹೆಜ್ಜೆ ಇಡಲಿದೆ ಎಂದು ಅವರು ತಿಳಿಸಿದರು. ಸಾಮಾನ್ಯರಿಗೆ ಮೀಸಲಾದ ಕಾಮಗಾರಿಗಳನ್ನು ಹೋರಾಟ ಮಾರ್ಗದಿಂದ ಪಡೆದುಕೊಳ್ಳಬೇಕು ರೂಗನ್ ತಿಳಿಸಿದರು. 18ಪ್ರತಿಶತಕ್ಕೆ ಮೀಸಲಾದ ಕಾಮಗಾರಿಗಳನ್ನು ಅನ್ಯರ ಪಾಲಾಗುವ ಸಂದರ್ಭ ಬಂದಲ್ಲಿ ಸಂಘಟಿತ ಹೋರಾಟ ನಡೆಸಲು ಸದಸ್ಯರು ಹಿಂದೇಟು ಹಾಕದೇ ಸದಸ್ಯರು ವ್ಯಯಕ್ತಿಕ ಸ್ವಾರ್ಥವನ್ನು ಬದಿಗೊತ್ತಿ ಸಹಕರಿಸಬೇಕು ಎಂದು ಸಂಘದ ಉಪಾಧ್ಯಕ್ಷ ವಿಠ್ಠಲ್ ಎಸ್.ಪಾಂಡೆ ತಿಳಿಸಿದರು.
 
ಎದುರಿನ ವ್ಯಕ್ತಿಗಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು ಅದರೊಂದಿಗೆ ಕಾಮಗಾರಿ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಇದೆಲ್ಲಕ್ಕೂ ತಾಳ್ಮೆ ಅತ್ಯವಶ್ಯಕ ಎಂದು ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಕಟ್ಟಿ ತಿಳಿಸಿದರು. ಹಕ್ಕಿಗಾಗಿ ನಿಸ್ವಾರ್ಥ ಹೋರಾಟ ಅನಿವಾರ್ಯ ಹೋರಾಟ ಸಂದರ್ಭದಲ್ಲಿ ಎಲ್ಲ ಸದಸ್ಯರು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಸಹ ಕಾರ್ಯದರ್ಶಿ ರಘುನಾಥ ಮೇತ್ರೆ ತಿಳಿಸಿದರು. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ತತ್ವಾದರ್ಶ ಮೂಲಕ ಮೀಸಲಾತಿ ಪ್ರಯೋಜನ ಪಡೆಯಲು ಶ್ರಮಿಸಬೇಕು ಎಂದು ಕೋಶಾಧ್ಯಕ್ಷ ಗಣಪತಿ ಸಂಗಮ್ ತಿಳಿಸಿದರು. ಸದಸ್ಯರುಗಳಾದ ಸಂಜೀವಕುಮಾರಜಂಜೀರ್, ಸೂರ್ಯಪ್ರಕಾಶ ಆರ್ಯ, ರವಿಚಂದ್ರ ಜಂಬಗಿ, ಶಂಕರ ಪ್ರಭು, ಮಾಣಿಕ ಸೋನಕೇರಾ, ಮಾಣಿಕಪ್ಪ ಮೋರೆ, ಶೇಷಪ್ಪ ಮಾಣಿಕಪ್ಪ, ರಾಜಶೇಖರ ಜಂಜೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.