ADVERTISEMENT

ಕಾವೇರಿ ನೀರು: ವಾಡಿ ಬಂದ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 6:15 IST
Last Updated 7 ಅಕ್ಟೋಬರ್ 2012, 6:15 IST

ವಾಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಿರುವ ಕರ್ನಾಟಕ ಬಂದ್ ಕರೆಗೆ ವಾಡಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ನೇತೃತ್ವದಲಿ ್ಲಕಾರ್ಯಕರ್ತರು ಬಂದ್ ಬೆಂಬಲಿಸಿ ಟೈರ್ ಸುಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀನಿವಾಸ್ ವೃತ್ತದಲಿ ್ಲಕಾರ್ಯಕರ್ತರು ಸೇರಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟುರಿವುದು ಕರ್ನಾಟಕ ಜನತೆಗೆ ದ್ರೊಹ ಬಗೆದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ವಾಡಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಮಾತನಾಡಿ, ಕೇಂದ್ರ ಸರ್ಕಾರ ಬರುವ ಚುನಾವಣೆ ದೃಷ್ಟಿಯಿಂದ ಕಾವೇರಿಗೆ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿದೆ.
 
ಇದನ್ನು ಪರಿಶೀಲನೆ ಮಾಡದೇ ರಾಜ್ಯ ಸರ್ಕಾರ ರಾತೊರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದೆ. ಆದ್ದರಿಂದ ಇಂಥ ಸರ್ಕಾರಗಳು ಅಧಿಕಾರಿದಲಿ ್ಲಮುಂದುವರಿಯುವದಕ್ಕೆ ಯಾವುದೇ ನೈತಿಕ ಹಕ್ಕು ಹೊಂದಿಲ.್ಲ ಇದರಿಂದ ಎಲ ್ಲಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾವೇರಿ

ಹೋರಾಟದಲಿ ್ಲಭಾಗವಹಿಸಬೇಕು ಎಂದು ಒತ್ತಾಯಿಸಿದರು. ಮಹ್ಮದ್ ಇಸ್ಮಾಯಿಲ್, ಮಹ್ಮದ್ ಅಶರಫ್, ಅಂಬ್ರೇಶ ಮಾಳಗಿ, ಚಾಂದ್, ಬಾಬುಗುತ್ತೆದಾರ್, ಸಂತೋಷ ಗುತ್ತೆದಾರ್, ದೌಲತ್‌ರಾವ ಚಿತ್ತಾಪುರಕರ್, ಶಂಕರ್ ಸಿಂಗ್, ಸಲ್ಮಾನ್ ಖಾನ್, ರಾಜು ಪ್ರತಿಭಟನೆಯಲಿ ್ಲಭಾಗವಹಿಸಿದ್ದರು. ಕರ್ನಾಟಕ ಬಂದ್ ಕರೆಗೆ  ಪಟ್ಟಣದ ಅಂಗಡಿ ಮಾಲಿಕರು ಬೆಂಬಲಿಸಿ ಅಂಗಡಿ ಸಂಪೂರ್ಣ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು. ಇದರಿಂದ ಮಾರ್ಕೆಟ್ ಏರಿಯಾ ಬಿಕೋ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.