ಬೀದರ್: ಜಿಲ್ಲೆಯ ನಗರ ಸೇರಿದಂತೆ ವಿವಿಧ ತಾಲ್ಲೂಕು ಹಾಗೂ ಹೊಬಳಿ ಗಳಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಆಚರಣೆ ಮಾಡಲಾಯಿತು.
ಬೀದರ್ ವರದಿ: ಜಿಲ್ಲಾ ಆಡಳಿತ ವತಿ ಯಿಂದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಸರಳ ವಾಗಿ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ. ಷಣ್ಮುಖ ಅವರು ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಬೀದರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಕಾರಣ ಜಯಂತಿ ಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಟೋಕರಿ ಕೋಲಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾ ದಾರ್, ಅಂಬಿಗರ ಚೌಡಯ್ಯ ಯುವ ಸೇನೆ ಸಂಘಟನೆಯ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಮಲನಗರ ವರದಿ: ಶೋಷಿತ ವರ್ಗದ ಧ್ವನಿಯಾಗಿ, ಸಮಾಜದಲ್ಲಿನ ಮೌಢ್ಯಗಳ ಅಳಿಸಿ ಹಾಕಲು ಪ್ರಯತ್ನಿಸಿದ ಅಂಬಿಗರ ಚೌಡಯ್ಯ ಅವರು ಶ್ರೇಷ್ಠ ವಚನಕಾರರ ಎಂದು ಪ್ರಾಚಾರ್ಯ ಬಿ.ಎಸ್.ರಿಕ್ಕೆ ಹೇಳಿದರು.
ಇಲ್ಲಿನ ಶಾಂತಿವರ್ಧಕ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರು ವಾರ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಿರಂಗ ಶುದ್ಧಿ ಜತೆಗೆ ಅಂತರಂಗದ ಶುದ್ಧಿಯಾಗಬೇಕು. ಮೇಲ್ವರ್ಗದ ದಬ್ಬಾಳಿಕೆ, ಪುರೋಹಿತ ಶಾಹಿಗಳ ಶೋಷಣೆ, ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆ, ವರ್ಗ ತಾರತಮ್ಯ ಖಂಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವ ಕೈಗೊಂಡಿದ್ದರು ಎಂದರು.
ಉಪನ್ಯಾಸಕ ಶಿವಾಜಿ ಆರ್.ಎಚ್, ದತ್ತಾತ್ರೇಯ ಸೂರ್ಯವಂಶಿ, ಪ್ರಕಾಶ ಹಿಪ್ಪಳಗಾವೆ, ಎಸ್.ಬಿಲಗುಂದೆ, ಸವಿತಾ ಬಿರಾದಾರ್, ರಾಜಕುಮಾರ ರಾಂಪುರೆ ಇದ್ದರು.
ಖತಗಾಂವ್ ವರದಿ: ಸಮೀಪದ ಖತಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಮುಖ್ಯ ಶಿಕ್ಷಕ ಸುಭಾಷ ಬಿರಾದಾರ್ ಪೂಜೆ ಸಲ್ಲಿಸಿ, ದೇವರ ಆರಾಧನೆಗೆ ಪರಿಶುದ್ಧವಾದ ಮನಸ್ಸು ಅಗತ್ಯ. ಆಡಂಬರದ ಪೂಜೆಯು ಸಮಾಜವನ್ನು ಅಂಧಕಾರದ ಕಡೆಗೆ ತಳ್ಳುತ್ತದೆ ಎಂದರು.
ಸೂರ್ಯಕಾಂತ ಮಹಾಜನ್, ಇಂದ್ರಜೀತ ಗವಳಿ, ರೇಖಾ ಮಂಠೋಳೆ, ಸುರೇಖಾ ಸಮದಡೆ, ಮಲ್ಲಮ್ಮಾ ಕಸ್ತೂರೆ, ಇಂದಿರಾಬಾಯಿ ಕಾಂಬಳೆ, ಶಿವಕುಮಾರ ಡೊಂಗರೆ, ಸಂಗೀತಾ ಬಿರಾದಾರ್, ದಿಶಾರಾಣಿ ಶಿಂಧೆ ಇದ್ದರು.
ಭಾಲ್ಕಿ ವರದಿ: ಪಟ್ಟಣದ ಗುರುವಾರ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಯುವ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ತಾಲ್ಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟೆ ಮಾತನಾಡಿದರು. ಬಾಬುರಾವ ಬೆಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಸಂತೋಷ ಬಿಜಿ ಪಾಟೀಲ, ಸಂತೋಷ ನಾಟೇಕರ್, ಧನರಾಜ ಮುಧಾಳೆ, ಪಂಡಾಜಿ ಕಾಳೆ, ತಿರುಪತಿ ಖಡಕಲೆ, ಅರವಿಂದ ಜಮಾದಾರ್, ಮಾರುತಿ ಬಿರಾದಾರ್, ನಾಗೇಶ ಬಿರಾದಾರ್, ದಯಾನಂದ ಬಿರಾದಾರ್, ಸುರಾಜ ಗುಂಗೆ, ಭೀಮ ಹುಗ್ಗೆ, ಮಾಣಿಕ ಖಡಕಲೆ, ಕಿಶನ ಗುಂಗೆ, ವಿಷ್ಣು ಹುಗ್ಗೆ ಇದ್ದರು.
ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಧನರಾಜ ಹುಗ್ಗೆ ಪ್ರಾಸ್ತಾವಿಕ ಮಾತನಾಡಿದರು. ನಾಗೇಶ ಹುಗ್ಗೆ ಸ್ವಾಗತಿಸಿದರು. ಸಂತೋಷ ಹಡಪದ ನಿರೂಪಿಸಿದರು. ವಿಶ್ವನಾಥ ಬೆಳಕಟ್ಟೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.