ADVERTISEMENT

ಜನಪದ ಕಲೆ ದಾಖಲೀಕರಣ ಅವಶ್ಯ

ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ನಾಗೇಂದ್ರ ಢೋಲೆ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 6:14 IST
Last Updated 5 ಅಕ್ಟೋಬರ್ 2017, 6:14 IST
ಜನಪದ ಕಲೆ ದಾಖಲೀಕರಣ ಅವಶ್ಯ
ಜನಪದ ಕಲೆ ದಾಖಲೀಕರಣ ಅವಶ್ಯ   

ಹುಮನಾಬಾದ್: ‘ನಶಿಸಿ ಹೋಗುತ್ತಿರುವ ಜನಪದ ಕಲೆಯ ಸಂರಕ್ಷಣೆಗಾಗಿ ಕಲೆ–ಕಲಾವಿದರ ದಾಖಲೀಕರಣ ಮಾಡುವ ಅಗತ್ಯ ಇದೆ’ ಎಂದು ಪ್ರೊ. ನಾಗೇಂದ್ರ ಢೋಲೆ ಅಭಿಪ್ರಾಯಪಟ್ಟರು.

ಕನ್ನಡ ಜಾನಪದ ಪರಿಷತ್‌ ತಾಲ್ಲೂಕು ಘಟಕ ವತಿಯಿಂದ ಮಂಗಳವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಸ್ಕೃತಿಯ ಮೂಲ ಬೇರು ಜನಪದ. ಅದನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಜೀವನದ ನೋವು– ನಲಿವಿನ ಕ್ಷಣಗಳನ್ನು ದಣಿವಾರಿಸಿಕೊಳ್ಳುವ ನೆಪದಲ್ಲಿ ಹಾಡುತ್ತಿದ್ದ ಕುಟ್ಟುವ –ಬೀಸುವ ಹಾಡುಗಳು ಈಗ ಸಂಪೂರ್ಣ ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿ’ ಎಂದು ಹೇಳಿದರು.

ADVERTISEMENT

ಹಿರಿಯ ಸಾಹಿತಿ ಎಚ್‌. ಕಾಶೀನಾಥರೆಡ್ಡಿ ಮಾತನಾಡಿ, ‘ಮನುಷ್ಯ ಬದುಕುವ ರೀತಿ, ನೀತಿಗಳೇ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿಯ ಮೂಲ ಜೀವಾಳ ಜನಪದ’ ಎಂದು ತಿಳಿಸಿದರು.

ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಶಿವರಾಜ ಮೇತ್ರೆ, ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿದರು. ಕನ್ನಡ ಜಾನಪದ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಈಶ್ವರ ತಡೋಳಾ ಅಧ್ಯಕ್ಷತೆ ವಹಿಸಿದ್ದರು.

ಭೀಮಸೇನ ಗಾಯಕವಾಡ ಸ್ವಾಗತಿಸಿದರು. ಪ್ರಕಾಶ ಬೊಂಬಳಗಿ ಮಾತನಾಡಿದರು. ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯಕುಮಾರ ಚೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.