ADVERTISEMENT

ಜನಮೆಚ್ಚುವಂತೆ ಕೆಲಸ ಮಾಡುವೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 11:10 IST
Last Updated 14 ಫೆಬ್ರುವರಿ 2011, 11:10 IST

ಚಿಟಗುಪ್ಪಾ: ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದ್ದರೂ ಗ್ರಾಮದಲ್ಲಿ ಪ್ರವಾಸಿ ಮಂದಿರ ಇಲ್ಲದಿರುವುದು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಠಲಪೂರ, ಬಸಿಲಾಪೂರಗಳಲ್ಲಿ ಶಾಸ್ವತ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದು. ಮನ್ನಾ ಏಖ್ಖೇಳಿ ಗ್ರಾಮದ ಬಸ್ ನಿಲ್ದಾಣ ಉನ್ನತಿಕರಣಗೊಳಿಸುವುದು, ಖಾಸಗಿ ಆಟೊ ನಿಲ್ದಾಣ ಸ್ಥಾಪನೆ, ಚಿಟಗುಪ್ಪಾ ನಿರ್ಣಾ ಮಾರ್ಗವಾಗಿ ಬೇಮಳಖೇಡಾ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸುವುದು, ಉಡಬನಳ್ಳಿ ಗ್ರಾಮದಲ್ಲಿಯ ಪ್ರೌಢ ಶಾಲೆಯ ನೂತನ ಕಟ್ಟಡದಲ್ಲಿ ಶಾಲೆ ಆರಂಭಿಸುವುದು ಈ ಎಲ್ಲವೂ ಹುಮನಾಬಾದ್ ತಾಲ್ಲೂಕಿನ ಬೇಮಳಖೇಡಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜನರ ಸಮಸ್ಯೆಗಳು.

ಸದಸ್ಯರ ಭರವಸೆ: ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿರುವ ಬೇಮಳಖೇಡಾ ಕ್ಷೇತ್ರದಲ್ಲಿ ಬರುವ ಮಾದಪ್ಪನ ಕೆರೆ, ಸೇಡಿಕುಣಿ, ಉಡಬನಳ್ಳಿ ಕೆರೆ, ವಿಠಲಪೂರ(ನಿಂಗದಳ್ಳಿ) ಕೆರೆ, ಕರಕನಳ್ಳಿ ಕೆರೆಗಳು ಅಭಿವೃದ್ಧಿ ಪಡಿಸಿ,  ಮೀನು ಸಾಕಣೆ, ಹೈನುಗಾರಿಕೆ, ಹನಿ ನಿರಾವರಿ ಯೋಜನೆಗಳ ಮೂಲಕ ರೈತರಿಗೆ ಹೆಚ್ಚಿನ ಸ್ವಾವಲಂಭನೆಯ ಬದುಕು ಕೊಡಿಸುತ್ತೇನೆ ಎಂದು ಕ್ಷೇತ್ರದ ಸದಸ್ಯೆ ಪ್ರಭುಶೇಟ್ಟಿ ಮೆಂಗಾ ಅವರು ತಿಳಿಸುತ್ತಾರೆ.ರೈತನಾಗಿದ್ದ ನಾನು ಮೊದಲು ರೈತರಿಗೆ ಹೆಚ್ಚಿನ ಲಾಭ ತರುವಂತಹ ಸರ್ಕಾರದ ಯೋಜನೆಗಳು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳುತ್ತಾರೆ.

ಹಂತಹಂತವಾಗಿ ಮೂಲ ಸೌಕರ್ಯಗಳಾದ ಶಿಕ್ಷಣ, ನೀರು, ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ, ಸಿ.ಸಿ ರಸ್ತೆ ನಿರ್ಮಾಣ, ಒಳಚರಂಡಿ ಕಾರ್ಯ ಕೈಗೊಳ್ಳಲಾಗುತ್ತದೆ. ಉಡಬನಳ್ಳಿ ಗ್ರಾಮದಲ್ಲಿಯ ಹೊಸ ಕಟ್ಟಡದಲ್ಲಿ ಪ್ರೌಢ ಶಾಲೆ ಆರಂಭಿಸಲು ಸಕಲ ಸೌಲಭ್ಯಗಳ ಪೂರೈಕೆ ಮಾಡಲಾಗುತ್ತದೆ. ಬೇಮಳಖೇಡಾ ಪ್ರವಾಸಿ ಮಂದಿರಕ್ಕೆ ಮುಂಬರುವ ದಿನಗಳಲ್ಲಿ ಹಣ ಮಂಜೂರು ಮಾಡಲಾಗುತ್ತದೆ.ಬಸ್ ಸೌಕರ್ಯ ತಕ್ಷಣ ಆರಂಭಿಸುವಂತೆ ಮಾಡುತ್ತೇನೆ, ಮನ್ನಾ ಏಖ್ಖೇಳಿ ಬಸ್ ನಿಲ್ದಾಣ ಉನ್ನತಿಕರಣ ಕಾರ್ಯದ ಬಗ್ಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯಾಧಿಕಾರಿ ನೇಮಕಾತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. 
     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.