ADVERTISEMENT

ಜ್ಞಾನಕ್ಕಿರುವ ಮೌಲ್ಯ ಹಣಕ್ಕಿಲ್ಲ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 7:05 IST
Last Updated 19 ಡಿಸೆಂಬರ್ 2013, 7:05 IST

ಬಸವಕಲ್ಯಾಣ: ಜ್ಞಾನ ಮತ್ತು ಗುಣಕ್ಕಿರುವ ಮೌಲ್ಯ ಹಣಕ್ಕೆ ಬರಲಾರದು ಎಂದು ಮುಚಳಂಬ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಮಠದಲ್ಲಿ ಬುಧವಾರ ನಡೆದ ಸತ್ಸಂಗ ಸಮ್ಮೇಳನದ ಸಮಾ­ರೋಪದಲ್ಲಿ ಮಾತನಾಡಿದರು. ಸತ್ಪುರುಷರು ತೋರಿದ ಮಾರ್ಗದಲ್ಲಿ ನಡೆದು ಜ್ಞಾನದ ಜ್ಯೋತಿಯನ್ನು ಪ್ರಜ್ವಲಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸದಾ ಸುಖಿಗಳಾಗಿ ಬಾಳಬೇಕು ಎಂದರು.

ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವರ ಮತ್ತು ಗುರುವಿನ ಮೇಲೆ ಭಕ್ತಿ, ಶ್ರದ್ಧೆ ಹೊಂದಿರಬೇಕು ಎಂದರು.
ಶೋಭಾವತಿ ಘಾಳೆ, ಜಲಪುರ ಶಿವಲಿಂಗೇಶ್ವರ ಸ್ವಾಮೀಜಿ, ದಂಡಾವತಿ ಶಿವಬಸವ ಸ್ವಾಮೀಜಿ, ಗೋಪಾಲಶಾಸ್ತ್ರೀ, ಸಿದ್ದೇಶ್ವರಿ ಮಾತನಾಡಿದರು.

ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಸುಭಾಷ ಪಾಟೀಲ, ಮಡಿವಾಳಪ್ಪ ದೇವಪ್ಪ, ಕಿಶೋರ ಮಾಲೇಕರ ಉಪಸ್ಥಿತ­ರಿದ್ದರು. ರಾಚಯ್ಯ ಸ್ವಾಮಿ, ಬಸವರಾಜ ಯಳಸಂಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯಳ­ಸಂಗಿ ಪರಮಾನಂದ ಸ್ವಾಮೀಜಿ ನಿರೂಪಿಸಿದರು.
ಉದ್ಘಾಟನೆ: ನಾಗಭೂಷಣ ಶಿವ­ಯೋಗಿ ಪದವಿ ಪೂರ್ವ ಕಾಲೇಜಿಗೆ ಶರಣಪ್ಪ ನರಶೆಟ್ಟಿ ಸ್ಮರಣಾರ್ಥ ದೇಣಿಗೆ­ಯಾಗಿ ಕೊಟ್ಟಿರುವ ವರ್ಗ­ಕೋಣೆಗಳ ಉದ್ಘಾಟನೆ ಈಚೆಗೆ ನಡೆಯಿತು.

ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿ­ದರು. ಪ್ರಣವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖಂಡರಾದ ಬಾಬು ಹೊನ್ನಾನಾಯಕ, ಶಿವರಾಜ ನರಶೆಟ್ಟಿ, ವೈಜನಾಥ ಕಾಮಶೆಟ್ಟಿ, ಅನಿಲ ಭೂಸಾರೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸರಸ್ವತಿ ಸಾಗಾವೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಲಾಬಾಯಿ ಗುರಣ್ಣ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.