ಬೀದರ್: ಹದಗೆಟ್ಟಿರುವ ಬೀದರ್-ಘೋಡಂಪಳ್ಳಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದ ಗುಂಪಾ ಬಳಿ ಇರುವ ಚಿಟ್ಟಾ ರಸ್ತೆಯಲ್ಲಿ ರಸ್ತೆತಡೆ ಮಾಡಿದರು.
ಪ್ರತಿಭಟನಾಕಾರರು ಸುಮಾರು ಅರ್ಧ ತಾಸು ರಸ್ತೆತಡೆ ನಡೆಸಿದರು. ಯಾವೊಂದು ವಾಹನವನ್ನೂ ಬಿಡದೇ ಇದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಬೀದರ್-ಘೋಡಂಪಳ್ಳಿ ರಸ್ತೆ ಬಹಳ ಹಾಳಾಗಿದೆ. ಹೀಗಾಗಿ ಗ್ರಾಮದ ಜನ ಹಾಗೂ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರವಾಗಿರುವ ಬೀದರ್‌ಗೆ ಬರಲು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಲ್ಲಿಕಾರ್ಜುನ ವೈ.ಎಸ್., ರಸ್ತೆ ನಿರ್ಮಿಸಲು ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು. ನಂತರ ರಸ್ತೆತಡೆಯನ್ನು ಹಿಂದಕ್ಕೆ ಪಡೆಯಲಾಯಿತು.
ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಪಸಾರಗೆ, ಅಧ್ಯಕ್ಷ ಸಾವನ್ ವಾಗ್ಲೆ, ಉಪಾಧ್ಯಕ್ಷರಾದ ಮೋಹನ್ ಹಳ್ಳದಕೇರಿ, ಸತೀಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೊಕ್ರಾಣೆ, ತಾಲ್ಲೂಕು ಅಧ್ಯಕ್ಷ ಪದ್ಮಕುಮಾರ್ ಪಾಟೀಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಜು ಖಾಜಾಪುರೆ, ನಗರ ಅಧ್ಯಕ್ಷ ವೀರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.