ADVERTISEMENT

ದೃಢ ಸಂಕಲ್ಪದಿಂದ ಮಾತ್ರ ಯಶಸ್ಸು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:45 IST
Last Updated 13 ಫೆಬ್ರುವರಿ 2012, 7:45 IST

ಬೀದರ್:  ದೃಢ ಸಂಕಲ್ಪದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಮುಂಬೈನ ರಾಜಯೋಗಿನಿ ಸಂತೋಷ ಅಭಿಪ್ರಾಯಪಟ್ಟರು.

ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಪ್ರಯುಕ್ತ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ನಿರುತ್ಸಾಹ ಹೊಂದಿರಬಾರದು. ಸಕಾರಾತ್ಮಕ ಯೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

 ಭಾತೃತ್ವದಿಂದ ಸುಂದರ ಸಮಾಜ ನಿರ್ಮಿಸಬಹುದಾಗಿದೆ ಎಂದು ಮೌಂಟ್ ಅಬುದ ರಾಜಯೋಗಿನಿ ದಾದಿ ರತನ್ ಮೋಹಿನಿ ನುಡಿದರು.

ಮಾನವರು ವಿಶ್ವಕುಟುಂಬಿಗಳಾಗಬೇಕು. ಯಾರ ಮನಸ್ಸನ್ನೂ ನೋಯಿಸಬಾರದು. ಪರಸ್ಪರ ಸಂತಸ ಹಂಚಿಕೊಂಡು ಸುಖಮಯ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಪ್ರೀತಿ, ವಾತ್ಸಲ್ಯ, ಶಾಂತಿ ಹಾಗೂ ಪರಸ್ಪರ ಸಹಕಾರ ಭಾವನೆ ಮೈಗೂಡಿಸಿಕೊಂಡರೆ ಜೀವನ ಹಸನಾಗುತ್ತದೆ ಎಂದರು.

ಕಷ್ಟದಲ್ಲಿರುವವರ ದುಃಖ ದೂರ ಮಾಡುವ ಶಕ್ತಿ ಸಿಹಿ ಮಾತುಗಳಿಗೆ ಇದೆ. ಅದನ್ನು ಸದುಯೋಗ ಪಡೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಾವೆಲ್ಲರು ಭೂಮಿಯ ಮೇಲಿರುವುದು ನೆಪಮಾತ್ರಕ್ಕೆ. ದೇವರು ಆಡಿಸಿದಂತೆ ಆಡುತ್ತೇವೆ. ಆದ್ದರಿಂದ ದೇವರನ್ನು ಮರೆಯಬಾರದು. ಪಾಲಕರ ಸೇವೆ ಮಾಡಬೇಕು ಎಂದು ಹೇಳಿದರು.

ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ನಿಮಿತ್ತ ರಾಜಯೋಗಿನಿ ದಾದಿ ರತನ್‌ಮೋಹಿನಿ ಕೇಕ್ ಕತ್ತರಿಸಿದರು.

ಬ್ರಹ್ಮಕುಮಾರಿ ಸಂಗೀತಾ ಬಹೇನಜಿ, ಬ್ರಹ್ಮಕುಮಾರಿ ಸಾವಿತ್ರಿ ಬಹೇನಜಿ, ಬ್ರಹ್ಮಕುಮಾರಿ ಸುಧಾ ಬಹೇನಜಿ, ಬ್ರಹ್ಮಕುಮಾರಿ ಮಹಾನಂದಾ ಬಹೇನಜಿ, ಬ್ರಹ್ಮಕುಮಾರಿ ಸೋಮ ಬಹೇನಜಿ, ಬ್ರಹ್ಮಕುಮಾರಿ ಪುಷ್ಪಾ ಬಹೇನಜಿ, ಬ್ರಹ್ಮಕುಮಾರಿ ಸೋಮಪ್ರಭಾ ಬಹೇನಜಿ, ಬ್ರಹ್ಮಕುಮಾರಿ ಲೀಲಾ ಬಹೇನಜಿ, ಬ್ರಹ್ಮಕುಮಾರಿ ಸರಸ್ವತಿ ಬಹೇನಜಿ, ಬ್ರಹ್ಮಕುಮಾರಿ ಲಕ್ಷ್ಮಿ ಬಹೇನಜಿ, ಬ್ರಹ್ಮಕುಮಾರಿ ಸುನಂದಾ ಬಹೇನಜಿ, ಬ್ರಹ್ಮಕುಮಾರ ನೀತಿನ್ ಮಧುಬನ್, ಬ್ರಹ್ಮಕುಮಾರ ಶ್ರೀನಿವಾಸ, ಬ್ರಹ್ಮಕುಮಾರ ಹಣಮಂತ, ಬ್ರಹ್ಮಕುಮಾರ ವಿಲಾಸ, ಬ್ರಹ್ಮಕುಮಾರ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕುಮಾರಿ ಪ್ರತಿಮಾ ಬಹೇನಜಿ ಸ್ವಾಗತಿಸಿದರು. ಬ್ರಹ್ಮಕುಮಾರಿ ವೀಣಾ ಬಹೇನಜಿ ನಿರೂಪಿಸಿದರು. ನೂಪುರ ನೃತ್ಯ ಅಕಾಡೆಮಿಯ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.