ADVERTISEMENT

ನೆಮ್ಮದಿ ಜೀವನಕ್ಕೆ ಬಸವತತ್ವ ಮಹಾ ಮದ್ದು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 5:00 IST
Last Updated 17 ನವೆಂಬರ್ 2012, 5:00 IST
ನೆಮ್ಮದಿ ಜೀವನಕ್ಕೆ ಬಸವತತ್ವ ಮಹಾ ಮದ್ದು
ನೆಮ್ಮದಿ ಜೀವನಕ್ಕೆ ಬಸವತತ್ವ ಮಹಾ ಮದ್ದು   

ಹುಮನಾಬಾದ್: ನೆಮ್ಮದಿ ಜೀವನಕ್ಕೆ ಬಸವತತ್ವ ಮಹಾಮದ್ದು ಎಂದು ಬೀದರ್ ಬಸವಸೇವಾ ಪ್ರತಿಷ್ಠಾನ ಅಕ್ಕ ಅನ್ನಪೂರ್ಣ ತಿಳಿಸಿದರು. 

ಪಟ್ಟಣದ ಬಸವೇಶ್ವರ ಬಡವಾಣೆಯ ಶೋಭಾ ಔರಾದೆ ಅವರ ನಿವಾಸದಲ್ಲಿ ಬಸವಸೇವಾ ಪ್ರತಿಷ್ಠಾನ 134ನೇ ಬಸವಜ್ಯೋತಿ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ನೀಲಮ್ಮ ಬಳಗ ಉದ್ಘಾಟನಾ ಸಮಾರಂಭದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.

ಜೀವನದಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೆ ಬಸವಾದಿ ಶರಣರ ವಚನಗಳ ಅಧ್ಯಯನ ಅತ್ಯಂತ ಅವಶ್ಯಕ. ಅದನ್ನು ಬಿಟ್ಟು ಮೂಢನಂಬಿಕೆಗೆ ಮೊರೆ ಹೋಗದಿರುವಂತೆ ಅವರು ಮನವಿ ಮಾಡಿದರು. ನೀಲಮ್ಮ ಬಳಗ ಉದ್ಘಾಟಿಸಿ, ಮಾತನಾಡಿದ ಅಕ್ಕ ಕರುಣಾದೇವಿ ಮಹಿಳೆಯರು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಬದುಕಬೇಕು ಎಂದು  ಸಲಹೆ ನೀಡಿದರು. ಬೀದರ್‌ನ ರಮೇಶ ಮಠಪತಿ ಪ್ರಕೃತಿ ಚಿಕಿತ್ಸೆಯ ಕುರಿತಾಗಿ ಮಾತನಾಡಿದರು.

ಕೌಟಗೆ ವಿಜಯಲಕ್ಷ್ಮಿ ಮೊದಲಾದವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಹವಾಲ್ದಾರ ಬಸವಣ್ಣನವರ ಸಪ್ತಸೂತ್ರ ಪಾಲನೆಯಿಂದ ಮಾನವನ ಜೀವನ ಸಾರ್ಥಗೊಳ್ಳುತ್ತದೆ ಎಂದು ತಿಳಿಸಿದರು.

ಬಸವಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ.ಎಸ್.ಆರ್.ಮಠಪತಿ, ಪ್ರಮುಖರಾದ ಬಸವರಾಜ ರುದ್ರವಾಡಿ, ಶರಣಬಸಪ್ಪ ಪಾರಾ, ಮಲ್ಲಿಕಾರ್ಜುನ ರಟಕಲೆ, ಶಿವರಾಜ ಕಣಜಿ, ಶಿವಶರಣಪ್ಪ ಬಪ್ಪಣ್ಣ, ಬಾಬುರಾವ ಅಲಿಯಂಬರ್, ವೀರಣ್ಣ ತಾಳಂಪಳ್ಳಿ, ಬಾಬುರಾವ ನಿಂಬೂರೆ, ಶಶಿಕಲಾ ರುದ್ರವಾಡಿ, ಸತ್ಯವತಿ ಮಠಪತಿ, ಕಲ್ಲನಾ ಸ್ವಾಮಿ ಮೊದಲಾದವರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.