ADVERTISEMENT

ಪೋಲಿಯೊ ಜನಜಾಗೃತಿ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 9:50 IST
Last Updated 18 ಫೆಬ್ರುವರಿ 2012, 9:50 IST
ಪೋಲಿಯೊ ಜನಜಾಗೃತಿ ಜಾಥಾಕ್ಕೆ ಚಾಲನೆ
ಪೋಲಿಯೊ ಜನಜಾಗೃತಿ ಜಾಥಾಕ್ಕೆ ಚಾಲನೆ   

ಹುಮನಾಬಾದ್: ಪ್ರಸಕ್ತ ವರ್ಷ ಭಾರತದಲ್ಲಿ ಪೋಲಿಯೊ ಪ್ರಕರಣ ಪತ್ತೆಯಾಗದಿದ್ದಲ್ಲಿ ಪೋಲಿಯೊ ಮುಕ್ತರಾಷ್ಟ್ರವೆಂದು ಘೋಷಿಸುವುದಕ್ಕೆ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯು ತೀರ್ಮಾನಿಸಿದೆ ಎಂದು ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಳ್ಳಿಖೇಡ(ಬಿ) ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಲ್ಸ್ ಪೋಲಿಯೊ ಲಸಿಕೆ ಜನಜಾಗೃತಿ ರ‌್ಯಾಲಿಯಲ್ಲಿ ಮಾತನಾಡಿದರು.

ದೇಶದಲ್ಲಿ 195-96ರಿಂದ ಪೋಲಿಯೊ ಲಿಸಿಕೆ ಹಾಕಿಸುವ ಯೋಜನಾ ಜಾರಿ ಬಂದಿದ್ದು, ಅಂದಿನಿಂದ ಈ ವರೆಗೆ ಪೊಲಿಯೋ ಪೀಡಿತರ ಸಂಖ್ಯೆ ಗಣನೀಯ ಕುಸಿದಿದೆ. 2009ರಲ್ಲಿ ಕೊನೆಯ ಪ್ರಕರಣ ಪತ್ತೆಯಾಗಿತ್ತು.
 
ಆದರೇ 2010, 11ಮತ್ತು 12ನೇ ಸಾಲಿನಲ್ಲಿ ಯಾವುದೇ ಪ್ರಕರಣಗಳು ಪತ್ತೆ ಆಗುವುದಕ್ಕೆ ಅವಕಾಶ ನೀಡಿದ ರೀತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ, ಅಂಗನವಾಡಿ ಸಿಬ್ಬಂದಿ ಈ ತಿಂಗಳ 19ರಂದು ನಡೆಯುವ ಪಲ್ಸ್ ಪೊಲೀಯೊಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪ್ರಾಮಾಣಿಕ ಪ್ರಯತ್ನಿಸಬೇಕು ಎಂದು ಡಾ.ಹುಲಸೂರೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಖಾತುನಬೀ, ಎ.ಎಸ್.ಐ ಶರಣಪ್ಪ, ಆರೋಗ್ಯ ಇಲಾಖೆಯ ತೀರ್ಥಪ್ಪ ಭೀಮಶೆಟ್ಟಿ, ಶಿಕ್ಷಕ ಸುಭಾಷ ಗಂಗಾ, ದತ್ತಾತ್ರೆಯ್, ಬಸವರಾಜ, ವೀರಶೆಟ್ಟಿ, ವಿವಿಧ ಶಾಲೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಸಮುದಾಯ ಆರೋಗ್ಯದಿಂದ ಗ್ರಾಮದ ಮುಖ್ಯ ಬೀದಿಗಳಲ್ಲಿ ಜನಜಾಗೃತಿ ರ‌್ಯಾಲಿ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.