ADVERTISEMENT

ಪ್ರಾಕೃತಿಕ ಸಮತೋಲನಕ್ಕಾಗಿ ಪರಿಸರ ರಕ್ಷಣೆಗೆ ಕರೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 10:20 IST
Last Updated 11 ಜೂನ್ 2012, 10:20 IST

ಬೀದರ್: ಒಂದು ಮರದ ಉಪಯೋಗ, ಅದು ಕೊಡುವ ಆಮ್ಲಜನಕ ಲೆಕ್ಕ ಹಾಕಿದರೆ ಅದರ ಮೌಲ್ಯ 50 ಲಕ್ಷಕ್ಕೂ ಅಧಿಕವಾಗಿದೆ ಎಂದು ಬಿ.ವಿ. ಭೂಮರೆಡ್ಡಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.

ಶರಣ ಉದ್ಯಾನದಲ್ಲಿ ಭಾನುವಾರ `ವಿಶ್ವ ಪರಿಸರ ದಿನ~ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪರಿಸರ ಬಹುಪಯೋಗಿ. ಪರಿಸರದ ರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರ ಸಂರಕ್ಷಿಸಲು ಮರಗಳನ್ನು ಬೆಳೆಸುವಂತೆ ಸಲಹೆ ಮಾಡಿದರು.

ಪರಿಸರ ಮಾಲಿನ್ಯದಿಂದಾಗಿ ಪ್ರಕೃತಿ ಸಮತೋಲನ ತಪ್ಪುತ್ತಿದೆ. ಎಲ್ಲರೂ ಜಾಗೃತರಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದು ಉದ್ಯಮಿ ಬಸವರಾಜ ಧನ್ನೂರು ಕಿವಿಮಾತು ಹೇಳಿದರು.

ADVERTISEMENT

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಉಸಿರಾಟಲು ಆಮ್ಲಜನಕ ಪೆಟ್ಟಿಗೆ ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದೀತು ಎಂದು ಸಾನ್ನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಆತಂಕಿಸಿದರು. ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು. ರಮೇಶ ಮಠಪತಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.