ADVERTISEMENT

ಬಸವಕಲ್ಯಾಣ: ಚಿತ್ರಕಲಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 6:10 IST
Last Updated 7 ಮಾರ್ಚ್ 2012, 6:10 IST

ಬಸವಕಲ್ಯಾಣ: ಇಲ್ಲಿನ ಬಸವೇಶ್ವರ ಚಿತ್ರಕಲಾ ಕಾಲೇಜಿನಲ್ಲಿ ಸೋಮವಾರ 18 ನೇ ವಾರ್ಷಿಕೋತ್ಸವ ಅಂಗವಾಗಿ ಚಿತ್ರಕಲಾ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಒಳಗೊಂಡ ಕಲಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಚಿತ್ರಕಲಾವಿದ ಬಸವರಾಜ ಮುಗಳಿ ಉದ್ಘಾಟಿಸಿದರು. ಹುಲಸೂರ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಕಲಾವಿದರ ಬದುಕು ಶೋಚನೀಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರಿಂದ ಇವರಿಗೆ ಸಹಕಾರ ದೊರೆಯಬೆಕು ಎಂದರು.

ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.
ಕಲಾವಿದರಾದ ಬಸವರಾಜ ಕುರಿ ಬೆಂಗಳೂರು, ಶ್ರೀಧರ ಚವ್ಹಾಣ ವಿಜಾಪುರ, ಸತೀಶ ವಲ್ಲೇಪುರೆ, ಪತ್ರಕರ್ತ ಮುಕುಂದ ನಿಂಬಾಳಕರ್, ಸಾಹಿತಿ ವಿಶ್ವನಾಥ ಮುಕ್ತಾ ಅವರನ್ನು ಸನ್ಮಾನಿಸಲಾಯಿತು. ಆದರ್ಶ ವಿದ್ಯಾರ್ಥಿಗಳೆಂದು ಅನಿಲಕುಮಾರ ಅಳ್ಳೆ, ಜ್ಯೋತಿ ಜಾಧವ ಅವರನ್ನು ಸತ್ಕರಿಸಲಾಯಿತು.

ಪ್ರಾಚಾರ್ಯ ಪ್ರಭುಲಿಂಗಯ್ಯ ಟಂಕಸಾಲಿಮಠ ಸ್ವಾಗತಿಸಿದರು. ಅಶೋಕಕುಮಾರ ನಿರೂಪಿಸಿದರು. ಕಲ್ಯಾಣರಾವ ಮದರಗಾಂವಕರ್ ವಂದಿಸಿದರು.

ಇದಕ್ಕೂ ಮೊದಲು ಕಲಾ ಪ್ರಾತ್ಯಕ್ಷಿಕೆ ನಡೆಯಿತು. ಕಲಾವಿದ ಶ್ರೀಧರ ಚವ್ಹಾಣ ಉದ್ಘಾಟಿಸಿದರು. ಕಲೆ ಸಮಾಜಮುಖಿ ಆಗಿರಬೇಕು. ಮೂರ್ತ, ಅಮೂರ್ತಗಳ ಕಲ್ಪನೆ ಕಲಾವಿದನಿಗೆ ಬೇಕು. ಬಣ್ಣ ಮತ್ತು ನೆರಳು ಬೆಳಕಿನ ಮಹತ್ವ ತಿಳಿದಿರಬೇಕು ಎಂದು ಹೇಳಿದರು.

ಅಭಿನವ ರುದ್ರಮುನಿ ಶಿವಾಚಾರ್ಯರು, ಪ್ರಭುಲಿಂಗಯ್ಯ ಟಂಕಸಾಲಿಮಠ, ಮಲ್ಲಿಕಾರ್ಜುನ ಹಲಿಂಗೆ, ತಾರಾಸಿಂಗ ರಾಠೋಡ, ಎಂ.ಬಿ.ಅಶೋಕಕುಮಾರ, ಬಸವರಾಜ ಕುರಿ ಉಪಸ್ಥಿತರಿದ್ದರು. ಮೂರು ದಿನಗಳವರೆಗೆ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕಲಾಕೃತಿಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.