ADVERTISEMENT

ಬಸವಕಲ್ಯಾಣ: ದಲಿತ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 7:06 IST
Last Updated 13 ಸೆಪ್ಟೆಂಬರ್ 2013, 7:06 IST

ಬಸವಕಲ್ಯಾಣ: ಹುಮನಾಬಾದ ತಾಲ್ಲೂ­­ಕಿನ ಸುಲ್ತಾನಾಬಾದ ವಾಡಿ­ಯಲ್ಲಿನ ದಲಿತರ ಓಣಿಯಲ್ಲಿನ ಸಮು­ದಾಯ ಭವನವನ್ನು ಜಪ್ತಿ ಮಾಡಿರು­ವುದನ್ನು ಖಂಡಿಸಿ ಸೋಮವಾರ ದಲಿತ ಸೇನೆಯಿಂದ ಬಸವಕಲ್ಯಾಣದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮನವಿ ಪತ್ರ ಸಲ್ಲಿಸಲಾಗಿದ್ದು ಸುಮಾರು 25 ವರ್ಷಗಳಿಂದ ಸಭೆ ಸಮಾರಂಭ ಮಾಡುತಿದ್ದ ಭವನವನ್ನು ತಹಶೀಲ್ದಾರರು ಜಪ್ತಿ ಮಾಡಿ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಘಟನೆಗೆ ಕಾರಣರಾದ ತಹಶೀಲ್ದಾರ ಬಾಲರಾಜ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು.

ದಲಿತ ಸೇನೆ ವಿಭಾಗೀಯ ಅಧ್ಯಕ್ಷ ಸುರೇಶ ಘಾಂಗ್ರೆ, ಅಶೋಕ ಸಿಂಗ್, ತಾಲ್ಲೂಕು ಅಧ್ಯಕ್ಷ ಶರದ್ ಖಾಡಿಲಕರ್ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಜಯಪ್ರಕಾಶ ಕಾಂಬಳೆ, ಆನಂದ ಗಾಯಕವಾಡ, ಶಿವಪುತ್ರ ಜಾಧವ, ವಿನೋದ ಗೋಡಬೋಲೆ, ರಾಜೀವ ಗಾಯಕವಾಡ, ಗೊಪಾಲ ಮಾಲೆ, ವಿನೋದ ದಾದೆ, ಹುಸೇನಿ ದಲಾಲೆ, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.