ADVERTISEMENT

ಬಸವತೀರ್ಥ ರಸ್ತೆ: ಸಂಚಾರಕ್ಕೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:59 IST
Last Updated 5 ಆಗಸ್ಟ್ 2013, 9:59 IST

ಹುಮನಾಬಾದ್: ಹುಮನಾಬಾದ್- ಕಲ್ಲೂರ ಮಾರ್ಗದ ಬಸವತೀರ್ಥ ರಸ್ತೆ ಹಾಳಾಗಿದ್ದು, ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಧಾರ್ಮಿಕ ಕ್ಷೇತ್ರ ಬಸವತೀರ್ಥದ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಬರುತ್ತಾರೆ. ಆದರೆ, ರಸ್ತೆಯಲ್ಲಿ

ಗುಂಡಿಗಳು ಮೂಡಿ ಹಲವು ದಿನ ಗತಿಸಿದರೂ ಪ್ರಗತಿ ಕಂಡಿಲ್ಲ. ವಾಹನಗಳು ಈ ಮಾರ್ಗದಲ್ಲಿ  ಸಾಗುವುದು ಕಷ್ಟಸಾಧ್ಯವಾಗಿದೆ.
`ಕಲ್ಲೂರವರೆಗೆ ತೆರಳುವ ಪ್ರಯಾಣಿಕರು ಜೀವಭಯದಿಂದ ಪ್ರಯಾಣಿಸುವುದು ಇಲ್ಲಿ ಸಾಮಾನ್ಯ. ಉತ್ತಮ ರಸ್ತೆ ಇದ್ದರೆ ಪರವಾಗಿಲ್ಲ. ಗುಂಡಿಗಳಿರುವ ರಸ್ತೆಯಲ್ಲಿ ಹೋಗಲೂ ನಾವು ಭಯ ಪಡುತ್ತಿದ್ದೇವೆ ಎನ್ನುತ್ತಾರೆ ಖಾಸಗಿ ವಾಹನಗಳ ಚಾಲಕರು.

`ರಸ್ತೆ ಹದಗೆಟ್ಟು ವರ್ಷಗಳೇ ಗತಿಸಿವೆ. ಚಾಲಕರಿಗೆ ಆಗುತ್ತಿರುವ ತೊಂದರೆಗಳ ಮಾಹಿತಿ ಇದೆ. ರಸ್ತೆ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ಆರಂಭಿಸಲಾಗುವುದು' ಎಂದು ಜಿ.ಪಂ. ಎಂಜಿನಿಯರ್ ಸಿ. ಎಸ್. ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.