ADVERTISEMENT

ಬಿದರಿ ಕುಶಲಕರ್ಮಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 7:55 IST
Last Updated 13 ಡಿಸೆಂಬರ್ 2012, 7:55 IST

ಬೀದರ್: ನಗರದ ಬಿದರಿ ಕುಶಲಕರ್ಮಿಗಳಿಗೆ ಮೂರು ತಿಂಗಳ ಅವಧಿಯ ಬಿದರಿ ತಯಾರಿಕೆ ಕುರಿತ ತರಬೇತಿ ಕಾರ್ಯಕ್ರಮ ಈಚೆಗೆ ನಗರದ ಬಿದ್ರಿ ಕಾಂಪ್ಲೆಕ್ಸ್‌ನಲ್ಲಿ ಆರಂಭವಾಯಿತು. `ಈ ಶಿಬಿರದಲ್ಲಿ ಬಿದರಿ ಕೃತಿಯ ನವೀನ ಮಾದರಿಗಳ ತಯಾರಿಕೆ ಕುರಿತು ತರಬೇತಿ ನೀಡಲಾಗುವುದು' ಎಂದು ಕೇಂದ್ರ  ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತ ಪಿ.ಶಶಿಧರ ಹೇಳಿದರು.

ಸಹಯೋಗ ಸ್ವಯಂ ಸೇವಾ ಸಂಸ್ಥೆ ಹಾಗೂ ಕೇಂದ್ರ ಜವಳಿ ಸಚಿವಾಲಯದ  ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಿದ್ದು,  `ಬದರಿ ಕುಶಲ ಕರ್ಮಿಗಳಿಗಾಗಿ ಇಲಾಖೆ ಕಳೆದ ಎಂಟು ವರ್ಷದಿಂದ  ವಿವಿಧ ತರಬೇತಿಗಳನ್ನು ಆಯೋಜಿಸಿದ್ದು, ಕುಶಲಕರ್ಮಿಗಳು ಈ ಶಿಬಿರದ ಸದುಪಯೋಗವನ್ನು ಪಡೆಯಬೇಕು' ಎಂದು ಸಲಹೆ ಮಾಡಿದರು.

ಸಹಯೋಗ ಸಂಸ್ಥೆಯ ನಿರ್ದೇಶಕ ಶಫೀಯುದ್ಧಿನ್ ಅವರು,  ತರಬೇತಿಯ ಉದ್ದೇಶ ಹಾಗೂ ಕಲಾಕೃತಿಗಳ ಹೊಸ ವಿನ್ಯಾಸದ ಕುರಿತು ಮಾತನಾಡಿದರು. ಹೈದರಾಬಾದ್‌ನ ವಿನ್ಯಾಸಗಾರ್ತಿ ಶ್ವೇತಾ, ತರಬೇತುದಾರ ಎಂ.ಎ.ರೈಫೂ ಉಪಸ್ಥಿತರಿದ್ದರು. 10 ಬಿದರಿ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಸಹಯೋಗದ ಅಧ್ಯಕ್ಷೆ ಕವಿತಾ ಹುಷಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.