ADVERTISEMENT

‘ಬೀದರ್–ಕಲಬುರ್ಗಿ ರೈಲು: ಕಾಂಗ್ರೆಸ್ ಕೊಡುಗೆ’

ಹುಮನಾಬಾದ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ವಿರುದ್ಧ ಖರ್ಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 7:18 IST
Last Updated 4 ಮೇ 2018, 7:18 IST

ಹುಮನಾಬಾದ್: ‘ಬೀದರ್– ಕಲಬುರ್ಗಿ ರೈಲು ಆರಂಭಿಸಿದ್ದು ನಮ್ಮ ಅವಧಿಯಲ್ಲಿ. ಆದರೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಧನೆ’ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕುಟುಕಿದರು.

ಹುಮನಾಬಾದ್‌ನಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶೇ 99 ಪ್ರತಿಶತ ಕಾರ್ಯ ಪೂರ್ಣಗೊಂಡ ನಂತರ ಹುಮನಾಬಾದ್‌–ಕಲ್ಬುರ್ಗಿ ರೈಲು ಸಂಚಾರಕ್ಕೆ ಚಾಲನೆ ನೀಡಿ, ಅದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ತರವಲ್ಲ ಎಂದು ಖರ್ಗೆ ನುಡಿದರು.

‘ನನಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮೋದಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೋದಲೆಲ್ಲ ನನ್ನ ಬಗ್ಗೆ ಇನ್ನಿಲ್ಲದ ಅನುಕಂಪ ತೋರಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಮುಚ್ಚಲು ಹಾಗೂ ನೌಕರರ ಬದುಕು ಬೀದಿ ಪಾಲಾಗಲು ಜೆಡಿಎಸ್‌, ಬಿಜೆಪಿ ಹೊಣೆ. ಆದರೆ,  ಬಿಜೆಪಿ ಜೆಡಿಎಸ್‌ ರಾಜಶೇಖರ ಬಿ.ಪಾಟೀಲ ಕಡೆ ಬೆರಳು ಮಾಡಿ ತೋರಿಸು ವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದ ಅವರು 371(ಜೆ) ಜಾರಿ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಿ ಮೋದಿಗೆ ಕಾಂಗ್ರೆಸ್‌ ಟೀಕಿಸುವ ನೈತಿಕ ಹಕ್ಕಿಲ್ಲ. ವೈಯಕ್ತಿಕ ನಿಂದನೆ ಕೈ ಬಿಟ್ಟು ತಾತ್ವಿಕ ವಿಚಾರಗಳ ಬಗ್ಗೆ ಚರ್ಚೆಗೆ ಮುಂದಾಗಲಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.