ADVERTISEMENT

`ಭಾಲ್ಕಿ ಮಠದ ಸೇವೆ ಅನ್ಯರಿಗೆ ಮಾದರಿ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 6:49 IST
Last Updated 3 ಡಿಸೆಂಬರ್ 2012, 6:49 IST

ಭಾಲ್ಕಿ: ನಾಡಿನ ಇತರ ಮಠ ಮಾನ್ಯರಿಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ  ಕಾರ್ಯಗಳು ಮಾದರಿ ಎನಿಸಿವೆ ಎಂದು ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾಲ್ಕಿಯಲ್ಲಿ ಶನಿವಾರ ಸಂಜೆ ನಡೆದ ಡಾ.ಬಸವಲಿಂಗ ಪಟ್ಟದ್ದೇವರ ನಾಗರಿಕ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮಠವನ್ನು ಬಿಟ್ಟು ಹೊರಗೆ ಬರದ ಅದೆಷ್ಟೋ ಸ್ವಾಮೀಜಿಗಳಿದ್ದಾರೆ. ಅವರು ಭಾಲ್ಕಿ ಶ್ರೀಗಳ ಸಾಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಸಂತರ ನಾಡಾದ ಮಹಾರಾಷ್ಟ್ರ ದಾದ್ಯಂತ ಕರ್ನಾಟಕದ ಬಸವ ಸಂದೇಶ ಹೊತ್ತು ಯಶಸ್ವಿ ಯಾತ್ರೆ ಪೂರೈಸಿರುವ ಡಾ. ಬಸವಲಿಂಗ ಪಟ್ಟದ್ದೇವರ ಸಾಹಸ ಅದ್ಭುತ ಎಂದು ಬಣ್ಣಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಲ್ಕಿಶ್ರೀಗಳ ಕಾರ್ಯಕ್ಕೆ ಎಲ್ಲಾ ಸಮಾಜದವರು, ಧಾರ್ಮಿಕ, ರಾಜಕೀಯ ಮುಖಂಡರು ಪಾಲ್ಗೊಂಡು ಸಹಕರಿಸುತ್ತಿರುವದಕ್ಕೆ ಅಭಿನಂದಿಸಿದರು.

ಎಂಎಲ್‌ಸಿ ರಘುನಾಥರಾವ ಮಲ್ಕಾಪುರೆ ಸಮಾರಂಭ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ದೀಪಿಕಾ ರಾಠೋಡ, ಜೆಡಿಎಸ್ ಮುಖಂಡ ಡಿ.ಕೆ. ಸಿದ್ರಾಮ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಹಿರಿಯ ವಕೀಲ ರಾಜಶೇಖರ ಅಷ್ಟೂರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಗಂದಗೆ, ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಚಂದ್ರಕಾಂತ ಬಿರಾದಾರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶಂಭೂಲಿಂಗ ಕಾಮಣ್ಣ, ರೋಟರಿ ಕ್ಲಬ್ ಅಧ್ಯಕ್ಷ ಉಮಾಕಾಂತ ವಾರದ್, ಸಚಿನ್ ರಾಠೋಡ, ರಾಚಪ್ಪ ಪಾಟೀಲ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.