ADVERTISEMENT

‘ಮಾನಸ ಗಂಗೋತ್ರಿ ಶಾಲೆ ಮಾದರಿ’

ಗಮನ ಸೆಳೆದ ಚಿಣ್ಣರ ಯಕ್ಷಗಾನ ನೃತ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 11:20 IST
Last Updated 28 ಮಾರ್ಚ್ 2018, 11:20 IST
ಹುಮನಾಬಾದ್ ಮಾನಸ ಗಂಗೋತ್ರಿ ಶಾಲೆಯಲ್ಲಿ ಭಾನುವಾರ ನಡೆದ ಚಿಣ್ಣರ ಹಬ್ಬದಲ್ಲಿ ಮಕ್ಕಳು ಪ್ರದರ್ಶಿಸಿದ ಅಂಬಾ ಭವಾನಿಯ ನವ ಅವತಾರ ಗಮನ ಸೆಳೆಯಿತು
ಹುಮನಾಬಾದ್ ಮಾನಸ ಗಂಗೋತ್ರಿ ಶಾಲೆಯಲ್ಲಿ ಭಾನುವಾರ ನಡೆದ ಚಿಣ್ಣರ ಹಬ್ಬದಲ್ಲಿ ಮಕ್ಕಳು ಪ್ರದರ್ಶಿಸಿದ ಅಂಬಾ ಭವಾನಿಯ ನವ ಅವತಾರ ಗಮನ ಸೆಳೆಯಿತು   

ಹುಮನಾಬಾದ್: ‘ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆಯಲ್ಲಿನ ಪಠ್ಯ ಬೋಧನೆ ಹಾಗೂ ಪಠ್ಯೇತರ ಚಟುವಟಿಕೆ ರಾಜಧಾನಿಯಂಥ ಮಹಾನಗರಗಳಲ್ಲಿ ಶಾಲೆಗಳಿಂತ ಕಡಿಮೆ ಇಲ್ಲ’ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವೀರಣ್ಣ ತುಪ್ಪದ್ ಹೇಳಿದರು.

ವಾಂಜ್ರಿ ಬಡಾವಣೆಯ ಅರುಣೋದಯ ಶಿಕ್ಷಣ ದತ್ತಿಯ ಅಡಿಯಲ್ಲಿ ನಡೆಯುತ್ತಿರುವ ಮಾನಸ ಗಂಗೋತ್ರಿ ಶಾಲೆಯಲ್ಲಿ ಮಾತಂಗ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಚಿಣ್ಣರ ಹಬ್ಬ ಉದ್ಘಾಟಿಸಿ, ಅವರು ಮಾತನಾಡಿದರು.

‘ಮಕ್ಕಳಲ್ಲಿನ ಸಾಮಾನ್ಯ ಜ್ಞಾನ, ಗಣಿತ ಪ್ರಾವೀಣ್ಯತೆ, ಇಂಗ್ಲಿಷ್‌ನಲ್ಲಿ ಮಾತನಾಡುವ ಶೈಲಿ ಜೊತೆಗೆ ಅತ್ಯಲ್ಪ ದಿನಗಳಲ್ಲಿ ಪಡೆದ ತರಬೇತಿಯಿಂದ ಅದ್ಭುತ ಪ್ರದರ್ಶನ ನೀಡಿದ ಮಕ್ಕಳ ಪ್ರತಿಭೆ ಮೆಚ್ಚುವಂಥದ್ದು’ ಎಂದು ಹೇಳಿದರು.

ADVERTISEMENT

ಶಿಕ್ಷಣ ಸಂಯೋಜಕ ರಮೇಶ ರಾಜೋಳೆ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ವಾಣಿಜ್ಯ ಉದ್ದೇಶದಿಂದ ಹುಟ್ಟಿಕೊಳ್ಳುತ್ತಿರುವ ಈ ವೇಳೆ ಮಾನಸ ಗಂಗೋತ್ರಿ ಅಧ್ಯಕ್ಷ ಅನಿಲ ಕಟ್ಟಿ ಅವರು ತಮ್ಮನ್ನು ತಾವು ಈ ಭಾಗದ ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಜ್ಞಾನ ದಾಸೋಹದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘ ನೀಯ’ ಎಂದರು.

ಸಿ.ಆರ್.ಪಿ ಪ್ರಕಾಶ ಬೊಂಬಳಗಿ ಹಾಗೂ ತಾಲ್ಲೂಕಿನ ಸಿಆರ್‌ಸಿ ಅಧಿಕಾರಿಗಳು ಇದ್ದರು. ಶಾಂತಾಬಾಯಿ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಂಬಾ ಭವಾನಿಯ ನವ ಅವತಾರ, ಯಕ್ಷಗಾನ ನೃತ್ಯ, ದೇಶಭಕ್ತಿ ಗೀತೆ ಆಧಾರಿತ ನೃತ್ಯ, ಕನ್ನಡ ಹಳೆ ಸಿನಿಮಾಗಳ ರಿಮೆಕ್‌ ಹಾಡುಗಳಿಗೆ ಮಕ್ಕಳು ಹಾಕಿದ ಹೆಜ್ಜೆ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.