ADVERTISEMENT

ರಾಜ್ಯದಲ್ಲಿ 21 ಅಭ್ಯರ್ಥಿಗಳು ಕಣಕ್ಕೆ

ಜನಾಂದೋಲನಗಳ ಮಹಾಮೈತ್ರಿ ಮುಖಂಡ ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 6:57 IST
Last Updated 19 ಏಪ್ರಿಲ್ 2018, 6:57 IST
ರಾಜ್ಯದಲ್ಲಿ 21 ಅಭ್ಯರ್ಥಿಗಳು ಕಣಕ್ಕೆ
ರಾಜ್ಯದಲ್ಲಿ 21 ಅಭ್ಯರ್ಥಿಗಳು ಕಣಕ್ಕೆ   

ಬೀದರ್‌: ‘ದುಷ್ಟ ಪ್ರವೃತ್ತಿಯ ರಾಜಕೀಯ ಪಕ್ಷಗಳು ಹಾಗೂ ಭ್ರಷ್ಟ ಅಭ್ಯರ್ಥಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಜನಾಂದೋಲನಗಳ ಮಹಾಮೈತ್ರಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 21 ಅಭ್ಯರ್ಥಿಗಳನ್ನು ಕಣಕ್ಕಿ ಳಿಸಿದೆ’ ಎಂದು ಮಹಾಮೈತ್ರಿ ಮುಖಂಡ ಎಸ್‌.ಆರ್‌. ಹಿರೇಮಠ ಹೇಳಿದರು.

‘ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ಗೆ ಪರ್ಯಾಯವಾದ ಅಭ್ಯರ್ಥಿ ಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಒಮ್ಮತ ಸಾಧ್ಯವಾದ ಮೂವರು ಅಭ್ಯರ್ಥಿಗಳಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

**

ADVERTISEMENT

ಪ್ರಜ್ಞಾವಂತ ಮತದಾರರು ಮತಾಂಧತೆ ಹಾಗೂ ಭ್ರಷ್ಟಾಚಾರಕ್ಕೆ ಒಳಗಾಗದೆ ಜಾಗರೂಕತೆಯಿಂದ ಮತ ಹಕ್ಕು ಚಲಾಯಿಸಿ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು.
-ರಾಘವೇಂದ್ರ ಕುಷ್ಟಗಿ, ಜನಾಂದೋಲನಗಳ ಮಹಾಮೈತ್ರಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.