ADVERTISEMENT

ವಿದ್ಯಾರ್ಥಿನಿಗೆ ರೂ. 10ಸಾವಿರ ಬಹುಮಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:55 IST
Last Updated 20 ಜುಲೈ 2012, 9:55 IST

ಬೀದರ್: ಅಮೆರಿಕದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ರವಿ ಪ್ರಭಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ನಾಜಮೀನ್ ಅವರಿಗೆ ಗುರುವಾರ ವೈಯಕ್ತಿಕವಾಗಿ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಿದರು. ಹಾಲಹಿಪ್ಪರ್ಗಾ ಗ್ರಾಮದ ನಾಜಮೀನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 81 ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿನಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರವಿ ಪ್ರಭಾ ಕಳೆದ ಐದು ವರ್ಷಗಳಿಂದ ತಮ್ಮ ಅಜ್ಜ ರಾಮಶೆಟ್ಟಿ ಪ್ರಭಾ ಹಾಗೂ ಅಜ್ಜಿ ಪ್ರಯಾಗಬಾಯಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ವಿದ್ಯಾರ್ಥಿಗೆ ರೂ. 10 ಸಾವಿರ ಪ್ರಶಸ್ತಿ ನೀಡುತ್ತಿದ್ದಾರೆ. ರವಿ ಅವರ ತಂದೆ ಮಲ್ಲಿಕಾರ್ಜುನ ಪ್ರಭಾ, ಪತ್ನಿ ಮಮತಾ, ಶಿಕ್ಷಕಿ ಸುಧಾ, ಗ್ರಾಮದ ಪ್ರಮುಖರಾದ ವಿಶ್ವನಾಥ ಬಿರಾದಾರ್, ಬಸವಣಪ್ಪ ಫುಲಾರೆ, ಶರಣಪ್ಪ ಪ್ರಭಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.