ADVERTISEMENT

ವಿವಿಧೆಡೆ ಶ್ರದ್ಧಾ ವಾಚನಾಲಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 7:35 IST
Last Updated 9 ನವೆಂಬರ್ 2012, 7:35 IST

ಜನವಾಡ: `ತೆಗೆಯಿರಿ ಪುಸ್ತಕ ಹೊರಗೆ- ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮ ಬೀದರ್ ತಾಲ್ಲೂಕಿನ ವಿವಿಧೆಡೆ ಬುಧವಾರ ನಡೆಯಿತು.

ಬಾವಗಿ: ಗ್ರಾಮದ ನಮ್ಮೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯ ರಾಜಕುಮಾರ್ ಪಾಟೀಲ್ ಉದ್ಘಾಟಿಸಿದರು. ಮುಖ್ಯಗುರು ಸರಸ್ವತಿ ಸಾವಳಗೆ ಅಧ್ಯಕ್ಷತೆ ವಹಿಸಿದ್ದರು.  ಗ್ರಾಮದ ನೈಟಿಂಗ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಆರ್‌ಸಿ ಜಗನ್ನಾಥ ಶಾಲಾ ವಚನಾಲಯದ ಬಗೆಗೆ ವಿವರಿಸಿದರು. ಗುಂಡಪ್ಪ ಕೊಳಾರ್ ಉದ್ಘಾಟಿಸಿದರು. ಮುಖ್ಯಗುರು ಸಂಗೀತಾ ಕಂಗನಕೋಟ್ ಅಧ್ಯಕ್ಷತೆ ವಹಿಸಿದ್ದರು.

ಜನವಾಡ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ವಿವಿಧ ಪುಸ್ತಕಗಳನ್ನು ಓದಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪನಸಾಲೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಗುರು ಶೈಲಜಾ, ಪ್ರಮುಖರಾದ ಅಶೋಕ್ ಸಜನೆ ಭಾಗವಹಿಸಿದ್ದರು.

ಕಪಲಾಪುರ(ಎ): ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ  ತೆಗೆಯಿರಿ ಪುಸ್ತಕ ಹೊರಗೆ- ಹಚ್ಚಿರಿ ಜ್ಞಾನದ ದೀವಿಗೆ  ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಮೈಲಾರೆ ಉದ್ಘಾಟಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಅಯೂಬ್‌ಖಾನ್ ವಿದ್ಯೆ ಕಸಿದುಕೊಳ್ಳಲಾಗದ ಸಂಪತ್ತು ಎಂದರು. ಮುಖ್ಯಗುರು ಸುಧಾಮ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮೂಲ್ಗೆ ಮಾತನಾಡಿದರು.

ಭಂಗೂರು: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮುಖ್ಯಗುರು ಮನೋಹರರಾವ್ ಭವರಾ ಉದ್ಘಾಟಿಸಿದರು. ಪುಸ್ತಕಗಳ ಮಹತ್ವ ಕುರಿತು ಸಹ ಶಿಕ್ಷಕಿ ಶೈಲಜಾ ಕಲ್ಲಪ್ಪ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.