ADVERTISEMENT

ವಿವಿಧೆಡೆ ಸರ್ ಎಂ. ವಿಶ್ವೇಶ್ವರಯ್ಯ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 10:23 IST
Last Updated 16 ಸೆಪ್ಟೆಂಬರ್ 2013, 10:23 IST

ಬೀದರ್: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವ ಮತ್ತು ಕೊಡುಗೆಯನ್ನು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಎಂಜಿನಿಯರ್‌ ದಿನ  ಆಚರಣೆ ಮೂಲಕ ಭಾನುವಾರ ನಗರದಲ್ಲಿ ವಿಭಿನ್ನವಾಗಿ ಸ್ಮರಿಸಲಾಯಿತು.

ಡೊಳ್ಳು ಕುಣಿತ ಮತ್ತಿತರ ಜನಪದ ಕಲೆಗಳೊಂದಿಗೆ ಸರ್‌ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಿದ್ದು, ಇದೇ ಸಂದರ್ಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಭವನ ನಿರ್ಮಾಣ ಕಾರ್ಯ­ಕ್ಕೂ ಶಂಕುಸ್ಥಾಪನೆ ನೆರವೇರಿ­ಸಲಾಯಿತು. ನಗರ ಹೊರವಲಯದ ಹಳ್ಳದಕೇರಿ ಸಮೀ­ಪದ ಸ್ವರ್ಣ ನಂದನ ಬಡಾವಣೆಯಲ್ಲಿ ಬೀದರ್‌ ಜಿಲ್ಲಾ ಸಿವಿಲ್‌ ಎಂಜಿನಿಯರುಗಳ ಸಂಘ ನಿರ್ಮಿ­ಸಲು ಉದ್ದೇಶಿಸಿರುವ ಭವನಕ್ಕೆ ಶಾಸಕ ಗುರು­ಪಾದಪ್ಪ ನಾಗಮಾರಪಳ್ಳಿ ಶಂಕುಸ್ಥಾಪನೆ ನೆರವೇರಿಸಿದರು.

‘ಸರ್‌ ಎಂ.ವಿಶ್ವೇಶ್ವರಯ್ಯ ಅವರು ಅಗಾಧ ಶಕ್ತಿಯನ್ನು ಹೊಂದಿದ್ದು, ದೂರದೃಷ್ಟಿ ಚಿಂತನೆ­ಯನ್ನು ಹೊಂದಿದ್ದ ಮಹಾನ್‌ ಎಂಜಿನಿಯರ್ ಆಗಿದ್ದರು. ಅವರ ಸಾಮರ್ಥ್ಯವನ್ನು ಬಿಂಬಿಸು­ವಂತೆ ಉತ್ತಮ ಭವನವನ್ನು ನಿರ್ಮಾಣ ಮಾಡ­ಬೇಕು’ ಎಂದು ಶಾಸಕರು ಸಲಹೆ ನೀಡಿದರು. ಸರ್‌ ಎಂ. ವಿಶ್ವೇಶ್ವರಯ್ಯ ಭವನವನ್ನು ನಿರ್ಮಾಣ ಮಾಡಲು ತಾವು ಕೂಡಾ ಅಗತ್ಯವಿರುವ ನೆರವು ನೀಡಲಿದ್ದು, ಜಿಲ್ಲೆಗೆ ಉತ್ತಮ ಕೊಡುಗೆ ಆಗುವಂತೆ ಉದ್ದೇಶಿತ ಭವನವನ್ನು ನಿರ್ಮಿಸಬೇಕು ಎಂದು ಹೇಳಿದರು.

ADVERTISEMENT

ಮೆರವಣಿಗೆ: ಎಂಜಿನಿಯರ್‌್ಸ ದಿನ ಅಂಗವಾಗಿ ನಗರದ ಪ್ರಮುಖ ರಸ್ತೆಯಲ್ಲಿ ಅಲಂಕೃತ ವಾಹನದ ಮೇಲೆ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರ­ವಣಿಗೆ ನಡೆಯಿತು.

ಕನ್ಸ್‌ಲ್ಟಿಂಗ್‌ ಸಿವಿಲ್ ಎಂಜಿ­ನಿಯರ್‌್ಸ ಸಂಘದ ಮೆರವಣಿ­ಗೆಯು ಬಸವೇಶ್ವರ ವೃತ್ತದಿಂದ ಆರಂ­ಭವಾಗಿ  ಭಗತ್‌­ಸಿಂಗ್‌ ವೃತ್ತ, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ರೋ­ಟರಿ ವೃತ್ತದ ಮೂಲಕ ಮುಖ್ಯ ಕಾರ್ಯ­ಕ್ರಮ ಆಯೋಜಿಸಿದ್ದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದ ಹತ್ತಿರ ಸಮಾವೇಶಗೊಂಡಿತು.

ಬಳಿಕ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗಾಗಿ ಮನರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿವಿಲ್ ಎಂಜಿನಿಯರ್‌್ಸ ಸಂಘದ ಅಧ್ಯಕ್ಷ ಶಾಂತಕುಮಾರ್ ಚಂದಾ, ಕಾರ್ಯದರ್ಶಿ ಶಿವಕುಮಾರ್ ಪಾಟೀಲ್‌, ಪ್ರಮುಖರಾದ ವೀರಶೆಟ್ಟಿ ಮಣಿಗೆರೆ, ಹಾವಶೆಟ್ಟಿ ಪಾಟೀಲ್‌, ರವಿ ಮೂಲಗೆ, ಮಲ್ಲಿಕಾರ್ಜುನ ಹುಗ್ಗಿ, ಶರಣು ಎಖ್ಖೇಳಿಕರ್, ದೀಲಿಪ ನಿಟ್ಟೂರೆ, ಅನಿಲ ಖೇಣಿ, ಶ್ರೀನಿವಾಸ ಸಾಳೆ, ಅಶೋಕ್‌ ಭೋಸ್ಲೆ, ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.