ADVERTISEMENT

ಶತಮಾನ ಕಂಡ ಚಿಟಗುಪ್ಪ ಮೆಥೊಡಿಸ್ಟ್ ಚರ್ಚ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 8:32 IST
Last Updated 24 ಡಿಸೆಂಬರ್ 2017, 8:32 IST

ಚಿಟಗುಪ್ಪ: ಪಟ್ಟಣದ ಮೆಥೊಡಿಸ್ಟ್ ಚರ್ಚ್ ಜಿಲ್ಲೆಯಲ್ಲಿಯೇ ಅತ್ಯಂತ ಪುರಾತನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೆಥೊಡಿಸ್ಟ್ ಕ್ರಿಶ್ಚಿಯನ್ ಸಮುದಾಯದ ದಕ್ಷಿಣ ಭಾರತ ಪ್ರಾಂತೀಯ ಘಟಕದ ಜಿಲ್ಲಾ ಕೇಂದ್ರವಾಗಿ ಸಲ್ಲಿಸುತ್ತಿರುವ ಸೇವೆಗೆ ಈ ವರ್ಷದ ಕ್ರಿಸ್ ಮಸ್ ಹಬ್ಬಕ್ಕೆ ಶತಮಾನ ತುಂಬಿದ ಕೀರ್ತಿ ಲಭಿಸಿದೆ.

ಶತಮಾನದ ಕಂಡ ಈ ಚರ್ಚ್ ಅಡಿಯಲ್ಲಿ ಜಿಲ್ಲೆಯಲ್ಲಿ 50 ಉಪ ಸಭೆ(ಚರ್ಚ್)ಗಳು ಹೊಂದಿದ್ದು, ಪ್ರತಿ ಚರ್ಚ್ ಕೆಳಗಡೆ 10 ಕ್ಕೂ ಹೆಚ್ಚು ಗ್ರಾಮಗಳ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಮೆಥೊಡಿಸ್ಟ್ ಚರ್ಚ್ ನ ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ನೆಲ್ಸ್ ನ್ ಸುಮಿತ್ರಾ ಪದಾಧಿಕಾರಿಗಳಾದ ಎ.ಇಮಾನವೆಲ್, ಕಾರ್ಯದರ್ಶಿ ಆರ್.ಕುಂದನ್ ತಿಳಿಸುತ್ತಾರೆ.

ಕ್ರೈಸ್ತ ಧರ್ಮ ಸಂದೇಶ ಪ್ರಸಾರ, ಶಾಂತಿ, ಪ್ರೀತಿ, ಸಹ ಭಾಳ್ವೆಯ ಮಂತ್ರ ಸಾರುವುದೇ ನಮ್ಮ ಮೂಲ ಉದ್ದೇಶ. ಜತೆಗೆ ಪಟ್ಟಣದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು, ಸಮೀಪದ ಮನ್ನಾ ಎಖ್ಖೇಳಿ ಗ್ರಾಮದಲ್ಲಿ ಮಕ್ಕಳ ಅಭಿವೃದ್ಧಿ ಕೇಂದ್ರಗಳು ನಡೆಸುವ ಮೂಲಕ ಗ್ರಾಮೀಣ ಭಾಗದ ನಾಗರಿಕರಲ್ಲಿ ಶೈಕ್ಷಣಿಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಎ.ಇಮಾನವೆಲ್.

ADVERTISEMENT

ಗ್ರಾಮೀಣ ಭಾಗದಲ್ಲಿ ವಿವಿಧ ಮಹಿಳಾ ಜಾಗೃತಿ ಕಾರ್ಯಕ್ರಮಗಳು ನಡೆಸುತ್ತ ಉತ್ತಮ ಸುಶಿಕ್ಷಕಿತ ಪ್ರಜೆಗಳಾಗಿ ಬದುಕುವ ಕಲೆ ನಮ್ಮ ಚರ್ಚ್ ಗಳ ಫಾದರ್ ಮೂಲಕ ಕಲಿಸಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಚರ್ಚ್ ನ ಮೇಲುಸ್ತುವಾರಿ ಜವಾಬ್ದಾರಿ ನಿರ್ವಹಿಸುತ್ತಿರುವ ಜಿಲ್ಲಾ ಮೇಲ್ವಿಚಾರಕ ರೇವೆರೆಂಡ್ ನೆಲಸನ್ ಸುಮಿತ್ರಾ (ಡಿ.ಸಿ) ಹೇಳುತ್ತಾರೆ. ವೀರೇಶ್.ಎನ್.ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.