ADVERTISEMENT

ಶ್ರೇಷ್ಠ ವ್ಯಕ್ತಿಗಳಾಗಲು ಪ್ರಯತ್ನಿಸಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 8:45 IST
Last Updated 21 ಜನವರಿ 2012, 8:45 IST
ಶ್ರೇಷ್ಠ ವ್ಯಕ್ತಿಗಳಾಗಲು ಪ್ರಯತ್ನಿಸಿ
ಶ್ರೇಷ್ಠ ವ್ಯಕ್ತಿಗಳಾಗಲು ಪ್ರಯತ್ನಿಸಿ   

ಬೀದರ್: ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಲು ಪ್ರಯತ್ನಿಸಬೇಕು ಎಂದು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡಕರ್ ಸಲಹೆ ಮಾಡಿದರು.

ನಗರದ ಸೈಂಟ್ ಜೋಸೆಫ್ ಶಾಲೆಯಲ್ಲಿ ಶುಕ್ರವಾರ ನಡೆದ ಸ್ವರೂಪ ಶಿಕ್ಷಣ ಜಾಗೃತಿ ಜಾಥವನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯು ಅಗಾಧ ಶಕ್ತಿ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆಯಲ್ಲಿ ಫೇಲಾದರೆ ಬೇಸರಪಟ್ಟುಕೊಳ್ಳದೇ ಉನ್ನತ ವ್ಯಕ್ತಿಯಾಗಲು ದೊರೆತ ಅವಕಾಶ ಎಂದು ಭಾವಿಸಬೇಕು. ಏಕೆ ಫೇಲಾದೆ ಎನ್ನುವುದನ್ನು ಅರಿಯಬೇಕು ಎಂದರು.

ಜ್ಞಾಪಕಶಕ್ತಿಯ ತಂತ್ರಗಳನ್ನು ಅನುಸರಿಸಿದರೆ ಪರೀಕ್ಷೆಯಲ್ಲಿ ನಿಸ್ಸಂಶಯವಾಗಿ ಯಶ ಕಾಣಬಹುದು. ನೃತ್ಯ, ಶಾರ್ಟ್ ನೋಟ್ಸ್, ಕಲ್ಪನೆ, ಹೋಲಿಕೆ, ಚಟುವಟಿಕೆ, ಚಿತ್ರಕಲೆ, ಮನರಂಜನೆಯ ಮೂಲಕ ವಿಷಯವನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು.

ಜ್ಞಾನಪಕ ಶಕ್ತಿಯ ತಂತ್ರಗಳನ್ನು ಮೈಗೂಡಿಸಿಕೊಂಡಲ್ಲಿ 24 ದಿನಗಳಲ್ಲಿ ಎಸ್.ಎಸ್.ಎಲ್.ಸಿ. ಪಠ್ಯಕ್ರಮವನ್ನು ಮುಗಿಸಬಹುದು ಹೇಳಿದರು.

ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡಲು ಶಿಕ್ಷಕರು ಶ್ರಮಿಸಬೇಕು ಎಂದು ಉದ್ಘಾಟನೆ ನೆರವೇರಿಸಿದ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಡಯಾಸ್ ತಿಳಿಸಿದರು. ವಿದ್ಯಾರ್ಥಿಗಳು ಮಾಥಮಾಟಿಕ್ಸ್, ಸೈನ್ಸ್ ಡ್ಯಾನ್ಸ್ ಪ್ರಸ್ತುತಪಡಿಸಿದರು.
 
ಕೈಸನ್ನೆ ಮೂಲಕ ತೋರಿಸಿದ ಮೊಬೈಲ್ ಸಂಖ್ಯೆಗಳನ್ನು ನಿಖರವಾಗಿ ಹೇಳಿ ಅಚ್ಚರಿ ಉಂಟು ಮಾಡಿದರು. ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಫಾದರ್ ಪ್ರವೀಣ ಮಾರ್ಟಿಸ್, ಸೈಂಟ್ ಜೋಸೆಫ್ ಸಂಯುಕ್ತ ಪದವಿಪೂರ್ವ ಕಾಲೇಜು ಉಪ ಪ್ರಾಚಾರ್ಯ ದೀಪಕ ಸ್ಯಾಮುಯೆಲ್, ಡಿ.ಎಡ್. ಕಾಲೇಜು ಉಪ ಪ್ರಾಚಾರ್ಯ ಬಾಲಾಜಿ, ಮುಖ್ಯಗುರು ಜ್ಯೋತಿಕಾ, ಪ್ರಮುಖರಾದ ಸುಮಾಡಕರ್, ಸ್ಮೀತಾ ಉಪಸ್ಥಿತರಿದ್ದರು. ಉಪನ್ಯಾಸಕ ಶಿವರಾಜ ಕೌಟಗೆ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.