ADVERTISEMENT

ಸಂವಿಧಾನ ಶಿಲ್ಪಿಗೆ ಭಾವಪೂರ್ಣ ನಮನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:27 IST
Last Updated 7 ಡಿಸೆಂಬರ್ 2013, 6:27 IST

ಬೀದರ್: ಡಾ. ಬಿ.ಆರ್‌.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ನಿಮಿತ್ತ ನಗರದ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಅವರ ವಿಚಾರ, ವ್ಯಕ್ತಿತ್ವವನ್ನು ಸ್ಮರಿಸಲಾಯಿತು.

ಜಿಲ್ಲಾಡಳಿತ ವತಿಯಿಂದ  ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮುಖರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಉಜ್ವಲ್‌ ಕುಮಾರ್ ಘೋಷ್‌, ಪೊಲೀಸ್‌ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್‌, ವಿವಿಧ ಸಂಘಟನೆಗಳ ಮುಖಂಡರಾದ ಮಾರುತಿ ಬೌದ್ಧೆ, ರಾಜಕುಮಾರ್‌ ಬನ್ನೇರ್, ಅರುಣ ಕುದುರೆ, ಅನಿಲ್‌ ಕುಮಾರ್‌ ಬೆಲ್ದಾರ್‌, ವಿಜಯ­ಕುಮಾರ್ ಸೋನಾರೆ, ಪಂಡಿತ್‌ರಾವ್ ಚಿದ್ರಿ, ಡಾ. ಶೈಲೇಂದ್ರ ಬೆಲ್ದಾಳೆ, ಮಾರುತಿ ಕಂಠಿ ಇದ್ದರು.

ಛಲವಾದಿ ಮಹಾಸಭಾ: ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಛಲವಾದಿ ಮಹಾಸಭಾ ವತಿಯಿಂದ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಮಹಾಂತಯ್ಯ ಸ್ವಾಮಿ, ಶಾಂತಯ್ಯ ಸ್ವಾಮಿ, ಸ್ವಾಮಿದಾಸ್ ಕೆಂಪೆನೋರ, ಹರೀಶ್ ಗಾಯಕವಾಡ್, ಸಕ್ಕುಬಾಯಿ ರಾಠೋಡ್, ಸಾರನಾಥ ಠಾಕೂರ್, ಪ್ರೇಮ್ ಕಾಂಬಳೆ, ಅರುಣ ಟೇಕರಾಜ್ ಮತ್ತಿತರರು ಇದ್ದರು.

ಯುವಕ ಸಂಘ: ರಾಹುಲ್ ಯುವಕ ಸಂಘದ ವತಿಯಿಂದ ನಗರದ ಹೊರ­ವಲಯದ ನೌಬಾದ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಆಚರಿಸ­ಲಾಯಿತು. ಉತ್ತಮ ಪ್ರಸಿಕರ್, ಗಣಪತಿ ಮೋರೆ, ಇಂದುಮತಿ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ದಲಿತ ಸಂಘರ್ಷ ಸಮಿತಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಔರಾದ್ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ರೋಗಿಗಳಿಗೆ ಹಣ್ಣು ವಿತರಿಸಿದರು.

ಸಮಿತಿ ತಾಲ್ಲೂಕು ಸಂಜೀವ­ಕುಮಾರ್ ಲಾಧಾ, ಡಾ. ಮಹೇಶ್ ಬಿರಾದಾರ್, ತುಳಸಿರಾಮ ಸೋನೆ, ರಘುನಾಥ ಶಿಂಧೆ, ಸಿದ್ಧಯ್ಯ ಸ್ವಾಮಿ, ಪ್ರಕಾಶ್ ಶಿಂಧೆ, ಧನರಾಜ ಶರ್ಮಾ, ತುಕಾರಾಮ ಹಸನ್ಮುಖಿ ಇದ್ದರು.

ಕಲ್ಯಾಣ ಶಾಲೆ: ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಕಲ್ಯಾಣ ಶಿಶುಮಂದಿರ, ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಸಹ ಶಿಕ್ಷಕ ಆರ್.­ಶ್ಯಾಮಸಾಗರ್­ ಮಾತನಾಡಿದರು. 
ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಹ ಶಿಕ್ಷಕ ಧನರಾಜ ಭೈರೆ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಸ್ವಾಗತಿಸಿದರು. ಸುರೇಕಲಾ ಪ್ರಭಾ ವಂದಿಸಿದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್: ನಗರದ ಬಿ.ವಿ.ಭೂಮರೆಡ್ಡಿ ಕಾಲೇಜ್­ನಲ್ಲಿ ಎವಿವಿಪಿ ಆಯೋಜಿಸಿದ್ದ ಸಮಾರಂಭದಲ್ಲಿ  ಪ್ರಾಚಾರ್ಯ ಡಾ. ಸಿ.ಎಸ್‌.ಪಾಟೀಲ ಮಾತನಾಡಿದರು.

ಎಬಿವಿಪಿಯ ಶರಣು ಪಾಟೀಲ, ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಬಸವರಾಜ ಕೊಟ್ಟೂರು, ನಗರ ಕಾರ್ಯದರ್ಶಿ ಪುಷ್ಪಕ ಬಿ.ಜಾಧವ ಇದ್ದರು.

ಹುಮನಾಬಾದ್ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಡಾ.ಅಂಬೇಡ್ಕರ್‌ ಅವರ 57ನೇ ಮಹಾ ಪರಿನಿರ್ವಾಣ ದಿನವನ್ನು  ಶುಕ್ರವಾರ ಆಚರಿಸಲಾಯಿತು.

ಹುಮನಾಬಾದ್‌ ಡಾ.ಅಂಬೇಡ್ಕರ್‌ ವೃತ್ತದಲ್ಲಿ ನಡೆದ ಡಾ.ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ ಕಾರ್ಯ­ಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಲಕ್ಷ್ಷ್ಮೀಪುತ್ರ ಮಾಳಗೆ ಡಾ.ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಗಜೇಂದ್ರ ಕನಕಟಕರ್‌, ಅಂಕುಶ ಗೋಖಲೆ, ಸುದರ್ಶನ ಮಾಳಗೆ, ಮಲ್ಲಿಕಾರ್ಜುನ ಶರ್ಮಾ, ಸಮಾಜ ಕಾರ್ಯಕರ್ತ ಸುಭಾಷ ಆರ್ಯ, ಪ್ರಶಾಂತ ಜಾನವೀರ್‌, ಈಶ್ವರ ತೆಲಂಗ್‌, ಲೋಹಿತಕುಮಾರ ಕಟ್ಟಿಮನಿ, ಸಂಜೀವಕುಮಾರ ಜಂಜೀರ್‌, ಶಂಕರ­ಕುಮಾರ ಪ್ರಿಯಾ, ವಿನೋದಕುಮಾರ ಸಾಗರ್‌, ಕೆ.ಬಿ. ಹಾಲ್ಗೋರ್ಟಾ, ಶಿವಲಿಂಗಪ್ಪ ದಿನೆ, ವಿನೋದ ಸಾಗರ್‌, ಧನರಾಜ ರಂಜೋಳಕರ್‌, ಧುಮ್ಮನಸೂರ ಈರಪ್ಪ ಇದ್ದರು.

ಹುಡಗಿ: ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಡಾ.ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನ ಅಂಗವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪತಕುಮಾರ, ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲ್ಲೂಕು ಸಂಚಾಲಕ ಮಾಣಿಕರಾವ ಬಿ.ಪವಾರ ಡಾ.ಅಂಬೇಡ್ಕರ್‌ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಪ್ರಭು ಮಾಳನಾಯಕ್‌ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಭುಲಿಂಗ, ಉಪಾಧ್ಯಕ್ಷೆ ರತ್ನಮ್ಮ ವಾರದ್‌, ಮರೆಪ್ಪ ಗೋರ್ಟಾ, ಮಾಣಿಕರಾವ ಕುಂದನ್‌, ಗೌತಮ್‌ ಸೋಮನೋರ್‌, ಉಮೇಶ ಹಿಲಾಲಪೂರ್‌, ಸುದಾಮ ಬೆಲ್ದಾರ್‌, ನಂದಕುಮಾರ, ಶಿವಸಾಗರ ಅಗಸಿ, ವಿಜಯಕುಮಾರ, ಬಸವರಾಜ ಮಿತ್ರಾ, ರಾಜಶೇಖರ ಪವಾರ, ರವಿ ಡಾಂಗೆ, ಸತೀಸ ಮಾಲೆ ಇದ್ದರು.
ಜೈಭೀಮದಳ: ಜೈಭೀಮದಳ ವತಿ­ಯಿಂದ ಆಚರಿಸಲಾದ ಕಾರ್ಯ­ಕ್ರಮದಲ್ಲಿ ಭಾರತೀಯ ಜೈಭೀಮ ದಳದ ತಾಲ್ಲೂಕು ಅಧ್ಯಕ್ಷ ಶಂಕರಪ್ರಭು ಜಂಜೀರ್‌ ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿಜಯಕುಮಾರ ಜಂಜೀರ್‌, ನಳಿನ್‌ಕುಮಾರ ಮುಸ್ತರಿ, ವಿಜಯಕುಮಾರ ಹಾಲ್ಗೊರ್ಟೆ, ಅವಿನಾಶ, ಅರ್ಜುನ್‌, ಬಸಪ್ಪ, ಅಶೋಕ ಇಟಗಿ, ಸುನೀಲ ಹುಣಸ­ಗೇರಾ, ಯಂಕಪ್ಪ ಹಿರಗೆ, ಅನೀಲ ರತ್ನಾಕರ್, ರಾಜು ಸಿಂಧೆ ಇದ್ದರು. 

ಮಾಣಿಕನಗರ: ಮಾಣಿಕ­ನಗರ ಗ್ರಾಮ ಪಂಚಾಯಿತಿ ವತಿಯಿಂದ ಆಚರಿಸಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೇವಮ್ಮ ಡಾ.ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸದಸ್ಯರಾದ ಘಾಳೆಮ್ಮ , ಶಾಂತಮ್ಮ, ವೀರಣ್ಣ, ಸುರೇಶ, ರವಿ ತುಂಬಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ಬಲ್ಲೂರೆ ಇದ್ದರು.

ಹಳ್ಳಿಖೇಡ(ಬಿ): ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ವಿದ್ಯಾವತಿ ಶಶಿಕಾಂತ ರಂಜೋಳಕರ್‌ ಡಾ. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸದಸ್ಯರಾದ ಧನರಾಜ ಹಮೀಲಪೂರಕರ್‌, ಸಂಜೀವಕುಮಾರ ಪ್ರಭಾ, ರಾಜಕುಮಾರ ಹುಡಗಿ  ಸುಮಿತ್ರಾ ಭಾಗವಹಿಸಿದ್ದರು. ತಾಲ್ಲೂಕಿನ ದುಬಲಗುಂಡಿ, ಡಾಕುಳಗಿ, ಘಾಟಬೋರಾಳ, ಧುಮ್ಮನಸೂರ, ಸಿತಾಳಗೇರಿ, ನಂದಗಾಂವ, ಮದರಗಾಂವ, ಘೋಡವಾಡಿ, ಬೇನಚಿಂಚೋಳಿ ಮುಂತಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಅವರ 57ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಔರಾದ್‌ ವರದಿ: ಪಟ್ಟಣದ ವಿವಿಧೆಡೆ ಶುಕ್ರವಾರ ಡಾ. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.
ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಾಲಾಜಿ ಗಾಯಕವಾಡ ವಿದ್ಯಾರ್ಥಿ­ಗಳಿಗೆ ಡಾ. ಅಂಬೇಡ್ಕರ್‌ ಅವರ ಜೀವನ ಮತ್ತು ಸಂದೇಶ ಹೇಳಿಕೊಟ್ಟರು. ಶಿಕ್ಷಕ ಗುರುನಾಥ ಕೋಟೆ, ಮಾಲತೇಶ ಬಟ್ಟೂರ, ರುದ್ರಪ್ಪ ಬಡಿಗೇರ್, ಶೆಶಿಕಲಾ ಮತ್ತು ಶಾಲೆ ಮಕ್ಕಳು ಇದ್ದರು.

ಮೊರಾರ್ಜಿ ಶಾಲೆ: ಪ್ರಾಂಶುಪಾಲ ಶಿವಾಜಿ ಪವಾರ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಂಬೇಡ್ಕರ್ ತುಳಿತಕ್ಕೊಳಗಾದ ಜರಿಗೆ ಧ್ವನಿಯಾದವರು ಎಂದು ಹೇಳಿದರು.

ಲಕ್ಷ್ಮಣರಾವ, ಅಶೋಕ ದರಬಾರೆ, ದಯಾಸಾಗರ ಭೆಂಡೆ ಮಾತ­ನಾಡಿದರು. ಶಿಕ್ಷಕ ದೇವಿದಾಸ, ಸಂಜುಕುಮಾರ ಮೇತ್ರೆ, ಸಂಜು­ಕುಮಾರ ಖಡ್ಕೆ, ಪವನ, ಬಬಿತಾ ಇದ್ದರು. ಶಾಂತಾ ಕನಕೆ ಸ್ವಾಗತಿಸಿದರು. ದಿಲೀಪಕುಮಾರ ನಿರೂಪಿಸಿದರು. ದಯಾನಂದ ರಾಜೋಳೆ ವಂದಿಸಿದರು.

ಸಂತಪುರ: ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹೇಶ ಬಿರಾದಾರ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಭುಶೆಟ್ಟಿ ಸೈನಿಕಾರ, ಧನರಾಜ ಮುಸ್ತಾಪುರ, ಗ್ರಾಮದ ದಲಿತ ಮುಖಂಡರು ಇದ್ದರು.

ದಲಿತ ಕಾರ್ಯಕರ್ತರ ಪ್ರತಿಭಟನೆ

ಔರಾದ್: ಸ್ಥಳೀಯ ತಹಶೀಲ್ದಾರ್‌ ಕಚೇರಿಯಲ್ಲಿ ಡಾ. ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿಲ್ಲ ಎಂದು ಆರೋಪಿಸಿ ದಲಿತ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಶುಕ್ರವಾರ ಕೆಲಕಾಲ ಪ್ರತಿಭಟನೆ ನಡೆಸಿದರು.
ಸುಧಾಕರ ಕೊಳ್ಳೂರ್‌, ನೀಲಕಂಠ ಮೇತ್ರೆ, ಎಸ್‌. ಕೆ. ಪ್ರೇಮ ಇತರರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿರುದ್ಧ ಧಿಕ್ಕಾರ ಕೂಗಿದರು.

ಡಾ, ಅಂಬೇಡ್ಕರ್‌ ಮಹಾ ಪರಿನಿರ್ವಾಣ ಕಾರ್ಯಕ್ರಮ ಆಚರಿಸುವ ಕುರಿತು ಸರ್ಕಾರದಿಂದ ಯಾವುದೇ ಮಾರ್ಗದರ್ಶನ ಬಂದಿಲ್ಲ. ಯಾರ ಭಾವನೆ ನೋಯಿಸುವ ಉದ್ದೇಶ ಇಲ್ಲ. ದಲಿತ ಕಾರ್ಯಕರ್ತರನ್ನು ಸಮಾಧಾನ ಮಾಡಲಾಗಿದೆ. ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ವೆಂಕಣ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT