ADVERTISEMENT

ಸಾವಿತ್ರಿಬಾಯಿ ಫುಲೆ ಸೇವೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:15 IST
Last Updated 3 ಅಕ್ಟೋಬರ್ 2012, 5:15 IST

ಭಾಲ್ಕಿ: ಅನಿಷ್ಠ ಪದ್ಧತಿಗಳನ್ನು ಅಳಿಸಿ, ಹಿಂದುಳಿದ ವರ್ಗಗಳ ಜನರ ಉದ್ಧಾರಕ್ಕಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆಯವರ ಸಮಾಜ ಸೇವೆ ಸ್ಮರಣೀಯವಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ನುಡಿದರು.

ಪಟ್ಟಣದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಎಸ್‌ಸಿ/ಎಸ್‌ಟಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗೊಂಡ ನೌಕರರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ನೌಕರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ಸಂಘಟನೆಯ ಚಟುವಟಿಕೆಗೆ ಅನುಕೂಲವಾಗಲು ಶಾಸಕರ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಭಾ ಫುಲೆ ಮುಂತಾದ ನಾಯಕರ ಹೋರಾಟದ ಹಿಂದೆ ಸಕಲ ಮಾನವ ಸಂಕುಲದ ಉದ್ಧಾರ ಅಡಗಿದೆ. ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿಯವರ ಹೆಸರಲ್ಲಿ ಸಂಘದಿಂದ ಸಾಧಕರಿಗೆ ಗೌರವಿಸುತ್ತಿರುವದು ಸಂತೋಷ ತಂದಿದೆ ಎಂದು ನುಡಿದರು.

ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಬಿ. ಶಿವಶಂಕರ, ಬೆಂಗಳೂರಿನ ವಿ.ಟಿ. ವೆಂಕಟೇಶಯ್ಯಾ, ಸಂಘದ ತಾಲ್ಲೂಕು ಅಧ್ಯಕ್ಷ ಡಾ. ಕಾಶಿನಾಥ ಚಲವಾ, ಎಂ.ಎಸ್. ಕಟಗಿ ಮುಂತಾದವರು ಮಾತನಾಡಿದರು.

ತಹಸೀಲ್ದಾರ ಸಿದ್ಧಲಿಂಗಪ್ಪ ನಾಯಕ, ಬಿಇಓ ಎಚ್.ಡಿ. ಹುನಗುಂದ, ಅಕ್ಷರದಾಸೋಹ ಸ.ನಿರ್ದೇಶಕ ಕೆ.ಬಿ. ಗೋಖಲೆ, ಎಂ.ಎಸ್. ಮನೋಹರ, ನಾಮದೇವ ಪೂಜಾರಿ, ಸತೀಶ ಮುದ್ದಾ, ನಾಗವೇಣಿ ಹೊಸಮನಿ, ತುಳಸಿರಾಮ ಲಾಖೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಡಿ. ಸಿಂಧೆ, ಗೌತಮ ಮೋರಂಬೆ, ಬಾಜಿರಾವ ಮೇತ್ರೆ ಮುಂತಾದವರು ವೇದಿಕೆಯಲ್ಲಿ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.