ADVERTISEMENT

ಸಿ.ಎಂ.ಗೆ ಬರ ಪರಿಶೀಲನೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 6:05 IST
Last Updated 11 ಏಪ್ರಿಲ್ 2012, 6:05 IST

ಹುಮನಾಬಾದ್: ಬರ ಪರಿಸ್ಥಿತಿ ಅಧ್ಯಯನ ಕೈಗೊಳ್ಳುವಂತೆ ಮುಖ್ಯಮಂತ್ರಿ ಸದಾನಂದ ಗೌಡರು ನೀಡಿದ ಆದೇಶ ಮೇರೆಗೆ ಹೈದರಾಬಾದ್ ಕರ್ನಾಟಕದ ಬೀದರ್ ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿನ ಬರ ಕುರಿತು ಸಮಗ್ರ ಪರಿಶೀಲನೆ ಕೈಗೊಂಡು ಏಪ್ರೀಲ್ 12ಕ್ಕೆ ಸಿ.ಎಂ.ಗೆ ವರದಿ ಸಲ್ಲಿಸಲಾಗುವುದು ಎಂದು ಅಧ್ಯಯನ ತಂಡದ ಅಧ್ಯಕ್ಷ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ದನಗಳಿಗೆ ಮೇವಿನ ಕೊರತೆ ಬೀಳದ ರೀತಿಯಲ್ಲಿ ಸಮಸ್ಯೆ ಉದ್ಭವಗೊಳ್ಳುವ ಮುನ್ನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿ, ಜೆಸ್ಕಾಂ, ಕೃಷಿ, ತೋಟಗಾರಿಕೆ, ಕಂದಾಯ ಮೊದಲಾದ ಇಲಾಖೆ  ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ತಿಳಿಸಿದರು. ಹುಮನಾಬಾದ್ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ ಅವರು ಅಧಿಕಾರಿಗಳ ಸಹಯೋಗದೊಂದಿಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. 

 ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲೂ ಅದೇ ಮಾದರಿಯಲ್ಲಿ ಕ್ರಮ ತೆಗೆದುಕೊಳ್ಳಲು ಈ ಮೂಲಕ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕೆರೆ ಹೂಳೆತ್ತುವಿಕೆ ಸಡಿಲಿಕೆ: ಕೆರೆ ಹೂಳೆತ್ತುವ ಸಂಬಂಧ ಈಗಾಗಲೇ ರೂ, 5ಕೋಟಿ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಹೇರಲಾಗಿದ್ದ    ನಿರ್ಭಂಧಗಳಲ್ಲಿ ಕೊಂಚ ಸಡಿಲಕೆ ನೀಡುವುದುರ ಜೊತೆಗೆ ಬೇಡಿಕೆಯನ್ನು    ಆಧರಿಸಿ, ಉದ್ಯೋಗ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. 

 ಬರುವ 10ನಗಳ ನಂತರ ಜಿಲ್ಲೆಯ ಬಾಕಿ ತಾಲ್ಲೂಕುಗಳಲ್ಲಿ ಬರ ಅಧ್ಯಯನ ಮತ್ತು ಪರಿಹಾರ ಸಂಬಂಧ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರವಾಸ ಮಧ್ಯ ಧುಮ್ಮನಸೂರ ಗ್ರಾಮದ ಹೊರ     ವಲಯದಲ್ಲಿ ಗ್ರಾಮಸ್ಥರಿಂದ ಸಮಸ್ಯೆ     ಆಲಿಸುವಾಗ ಈ ತಿಂಗಳ 14ರಂದು ಡಾ.ಅಂಬೇಡ್ಕರ ಜಯಂತಿ ಇರುವುದು ಗೊತ್ತಿದ್ದರೂ ಈವರೆಗೆ ಅಂಬೇಡ್ಕರ ವೃತ್ತದ ಪಕ್ಕದ ಕಂಭ ವಿದ್ಯುತ್ ದೀಪ ಅಳವಡಿಸಿಲ್ಲ. ಮತ್ತು ದಲಿತರ ಓಣಿಗಳಲ್ಲಿನ ಚರಂಡಿ ತುಂಬಿ ರಸ್ತೆಮಧ್ಯ ಹೊರದು ನಿಂತು ರೋಗಭೀತಿಗೆ     ಕಾರಣವಾಗಿದೆ. ತುರ್ತಾಗಿ ವ್ಯವಸ್ಥೆ  ಸರಿಪಡಿಸಲು ಸಂಬಂಧಿತರಿಗೆ ಆದೇಶಿಸುವಂತೆ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ದಲಿತ ಬಡಾವಣೆಯ ಮುಖಂಡ ವೀರಪ್ಪ ಧುಮ್ಮನಸೂರ ಒತ್ತಾಯಿಸಿದರು.   

   ಶಾಸಕ ರಾಜಶೇಖರ ಪಾಟೀಲ, ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ, ತಹಸೀಲ್ದಾರ ಸಿ.ಲಕ್ಷ್ಮಣರಾವ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಸದಸ್ಯ ಗಜೇಂದ್ರ ಕನಕಟಕರ್,    ಧುಮ್ಮನಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಕರಂದ ಕುಲಕರ್ಣಿ, ಮಾಣಿಕನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಲಿವಾಹನ ರೂಗನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ಇದ್ದರು. ಧುಮ್ಮನಸೂರ ಗ್ರಾಮದ ಗಣ್ಯರಾದ
ವಿನೋದ ಪಾಟೀಲ, ದಿಲೀಪ ಭಮಶೆಟ್ಟಿ ಮೊದಲಾದವರು ಇದ್ದರು. ಸಮಸ್ಯೆ ಆಲಿಸಿದ ಸಚಿವರು  ತಕ್ಷಣ ಸೌಲಭ್ಯ ಕಲ್ಪಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಆದೇಶಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.