ADVERTISEMENT

ಹರಕೆ ತೀರಿಸಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:35 IST
Last Updated 7 ಜನವರಿ 2012, 9:35 IST

ಜನವಾಡ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಸವಕಲ್ಯಾಣ ಶಾಸಕ ಬಸವರಾಜ ಪಾಟೀಲ್ ಅಟ್ಟೂರು ಗುಣಮುಖರಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಗುರುವಾರ ಹರಕೆ ತೀರಿಸಿದರು.

ಅಟ್ಟೂರು ಶೀಘ್ರ ಗುಣಮುಖರಾದರೆ ಗ್ರಾಮದ ವೀರಭದ್ರಪ್ಪನವರ ದೇವಸ್ಥಾನದಲ್ಲಿ 51 ತೆಂಗಿನಕಾಯಿಗಳನ್ನು ಒಡೆಯುವುದಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅದರಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆಂಗಿನ ಕಾಯಿಗಳನ್ನು ಒಡೆದರು. ಅಟ್ಟೂರು ಅವರು ನೂರು ವರ್ಷ ಬಾಳಲಿ. ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಅಟ್ಟೂರು ಅಭಿಮಾನಿ ಪಂಡಿತ ಢೋಣೆ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ದೀಪಕ ಗಾದಗೆ, ಯುವ ಮುಖಂಡ ಸಂಗಮೇಶ ಪಾಟೀಲ್ ಅಲಿಯಂಬರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಷ ಒಡೆಯರ್, ಸದಸ್ಯರಾದ ಡಾ. ಕಾಮಶೆಟ್ಟಿ ಘೋಡಂಪಳ್ಳಿ, ವಿಶ್ವನಾಥ ಕೋಟೆ, ಡಾ. ಸುನೀಲ ಗಂಜೆ, ಅಶೋಕ ಢೋಣೆ, ಶಿವರಾಜ ಪಾಟೀಲ್, ಶ್ರೀಪತರಾವ ಢೋಣೆ, ಪುಂಡಲಿಕ ರಾಯಗೊಂಡೆ, ಸಂಜು ಢೋಣೆ, ಎಕ್ಬಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಶಂಕುಸ್ಥಾಪನೆ:  ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಬಾಬುರಾವ ಮಲ್ಕಾಪುರೆ ಬೀದರ್ ತಾಲ್ಲೂಕಿನ ಮಾಳೆಗಾಂವ ಗ್ರಾಮದಲ್ಲಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

2011-12ನೇ ಸಾಲಿನ ಬಿ.ಆರ್.ಜಿ.ಎಫ್. ಯೋಜನೆಯಡಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಾತ್ಯತೀತ ಜನತಾದಳದ ಮುಖಂಡ ಬಾಬುರಾವ ಮಲ್ಕಾಪುರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮೃತ್, ಸದಸ್ಯ ಅರುಣಕುಮಾರ, ಕಿರಿಯ ಬಾಬುರಾವ ಮೇತ್ರೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.