ADVERTISEMENT

‘ಬಂಜಾರರು ಸಂಘಟಿತರಾಗಿ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:25 IST
Last Updated 23 ಸೆಪ್ಟೆಂಬರ್ 2013, 6:25 IST

ಚಿಟಗುಪ್ಪಾ: ಬಂಜಾರ ಜನಾಂಗದ ಸಂಘಟನೆಗಾಗಿ ಸಮಾಜದ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ದುಡಿಯಬೇಕು ಎಂದು ಸಮಾಜದ ಜಿಲ್ಲಾಧ್ಯಕ್ಷ ಸಿದ್ಧಾರ್ಥ ರಾಠೋಡ ಹೇಳಿದರು.

ಪಟ್ಟಣದ ಆರ್ಯಸಮಾಜ ಮಂದಿರದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಸಭೆಯಯಲ್ಲಿ ಅವರು ಮಾತನಾಡಿ, ನಾಡಿನಾದ್ಯಂತ ಬಂಜಾರ ಜನಾಂಗ ಅಭಿವೃದ್ಧಿಯಿಂದ ದೂರ ಉಳಿದಿದ್ದು,  ಸಾಕ್ಷರತೆಯ ಬೆಳಕಿನಿಂದ ಎಲ್ಲರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಆನಂದ ರಾಠೋಡ್‌, ಪ್ರಧಾನ ಕಾರ್ಯದರ್ಶಿ ಸುಜಿತ್‌ ರಾಠೋಡ್‌ ಮಾತನಾಡಿದರು.
ಬಂಜಾರ ಸಮಾಜದ ಹುಮನಾಬಾದ್‌ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ರವಿದಾಸ್‌.ಡಿ.ನಾಯಕ್‌ (ಅಧ್ಯಕ್ಷ), ಅನೀಲ ವಿ.ನಾಯಕ್‌ (ಉಪಾಧ್ಯಕ್ಷ), ರವಿಕುಮಾರ್‌.ಆರ್‌. ಜಾಧವ (ಪ್ರಧಾನ ಕಾರ್ಯದರ್ಶಿ), ದಶರಥ ಚವ್ಹಾಣ (ಕಾರ್ಯದರ್ಶಿ), ಪ್ರಹ್ಲಾದ ಎಸ್‌. ಚವ್ಹಾಣ (ಖಜಾಂಚಿ), ಮುರಲಿ ಚವ್ಹಾಣ, ವಿಷ್ಣು ರಾಠೋಡ್‌, ಸಂತೋಷ ಪಾಟೀಲ್‌, ದೇವಿದಾಸ ಚವ್ಹಾಣ, ಸಂಜುಕುಮಾರ ನಾಯಕ್‌, ಮೋಹನ ಚೌವ್ಹಾಣ (ಸದಸ್ಯರು) ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.