ADVERTISEMENT

‘371(ಜೆ) ಅವಕಾಶ ಸದ್ಬಳಕೆ ಮಾಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 6:44 IST
Last Updated 18 ಮಾರ್ಚ್ 2014, 6:44 IST

ಹುಮನಾಬಾದ್‌: ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಎಂದು ರಾಮಚಂದ್ರ ವೀರಪ್ಪ ಆರ್ಯ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಭೀಮರಾವ ಕುಲಕರ್ಣಿ ಹೇಳಿದರು.

ನಗರದ  ಯಲಾಲ್‌ ಶಿಕ್ಷಣ ದತ್ತೀಯ ಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಂ 371(ಜೆ) ಅಡಿಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಸತತ ಪರಿಶ್ರಮಪಟ್ಟು ಯಶಸ್ಸು ಸಾಧಿಸಬೇಕು ಎಂದರು.

ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಬತಲಿ ಮಾತನಾಡಿ, ವಿದ್ಯೆ ಯಾರೊಬ್ಬರೂ ಕದಿಯಲಾಗದು ಸಂಪತ್ತು ಅಂಥ ಸಂಪತ್ತು ಗಳಿಸಲು ವಿದ್ಯಾರ್ಥಿಗಳು ಯತ್ನಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ನಾಗಶೆಟ್ಟಿ ಯಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಅನಿಲಕುಮಾರ ಲದ್ದಿ, ಮೀನಾಕ್ಷಿ ಯಲಾಲ್‌, ರಮೇಶರಾವ ಜಾಧವ್‌, ಸಂಗೀತಾ, ಬಿ.ಸಂಪ್ರೀತಿ, ಆಶಾದೇವಿ , ಅನ್ನಪೂರ್ಣ, ಸೋಮನಾಥ ರೊಟ್ಟೆ, ಶಿಲ್ಪಾ, ಸುರೇಶ ಬಪ್ಪಣ್ಣಿ, ಸುಷ್ಮಾ, ಮುಖ್ಯಶಿಕ್ಷಕ ತುಕಾರಾಮ ಬಾಯಿನೋರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.